ಬೆಂಗಳೂರು: ಕರ್ನಾಟಕಕ್ಕೆ ಕೇಂದ್ರ ಸರ್ಕಾರವು ರಾಷ್ಟ್ರೀಯ ನೈಸರ್ಗಿಕ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಯಿಂದ ₹1,870 ಕೋಟಿ ಪರಿಹಾರ ನೀಡಲು ಅಮಿತ್ ಶಾ ನೇತೃತ್ವದ ಉನ್ನತ ಮಟ್ಟದ ಸಭೆ ತೀರ್ಮಾನಿಸಿದೆ. ಅಕ್ಟೋಬರ್ 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ₹1200 ಕೋಟಿ ಪರಿಹಾರ ನೀಡಿದ್ದು, ಅದರ ಜತೆಗೆ ಇದು ಹೆಚ್ಚುವರಿ ಪರಿಹಾರವಾಗಿದೆ ಎಂದು ಕರ್ನಾಟಕ ಬಿಜೆಪಿ ಟ್ವೀಟಿಸಿತ್ತು.
ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ₹1870 ಕೋಟಿ ಪರಿಹಾರ ನೀಡಿದೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ 2ನೇ ಕಂತಿನಲ್ಲಿ ₹669 ಕೋಟಿ ಹೆಚ್ಚುವರಿ ಪರಿಹಾರ ನಿಧಿ ನೀಡಲಾಗಿದೆ ಎಂದು ರಾಜ್ಯ ಸರ್ಕಾರದ ಅಧಿಕಾರಿಗಳು ಹೇಳುತ್ತಿದ್ದಾರೆ. ನಿರ್ಮಾಣ ಕಾರ್ಖಾನೆಗಳು ಮುಚ್ಚುತ್ತಿರುವ ಹೊತ್ತಲ್ಲಿ ಬಿಜೆಪಿಯ ಸುಳ್ಳು ಸುದ್ದಿ ಕಾರ್ಖಾನೆ ಭರ್ಜರಿಯಾಗಿ ಕಾರ್ಯವೆಸಗುತ್ತಿದೆ ಎಂದಿದ್ದರು.
ಸಿದ್ದರಾಮಯ್ಯ ಅವರ ಈ ಟ್ವೀಟ್‌ಗೆ ಮರುತ್ತರ ನೀಡಿದ ಬಿಜೆಪಿಸಿದ್ದರಾಮಯ್ಯನವರೇ,ನಾವು ನಿಮಗೆ ಶರಣಾಗುತ್ತೇವೆ. ನಿಮ್ಮಂತೆ ಅಥವಾ ಕಾಂಗ್ರೆಸ್‌ನಂತೆ ಸುಳ್ಳು ಸುದ್ದಿ ಕಾರ್ಖಾನೆ ನಡೆಸಲು ನಮ್ಮಿಂದ ಆಗಲ್ಲ.
ನಾವು ಗಾಂಧೀಜಿಯಂತೆ ಸತ್ಯದ ಮಾತುಗಳಲ್ಲಿ ನಂಬಿಕೆಯಿರಿಸಿದ್ದೇವೆ. ನಿಮ್ಮಂತೆ ಸುಳ್ಳುಗಳನ್ನು ಬಿತ್ತರಿಸುವುದಿಲ್ಲ. 2013- 18ರ ಅವಧಿಯಲ್ಲಿ ನೀವು ನೀಡಿದ ಸುಳ್ಳು ಭಾಗ್ಯಗಳನ್ನು ಕನ್ನಡಿಗರಿಗೆ ನೆನಪಿದೆ ಎಂದುಟ್ವೀಟಿಸಿದೆ.
ಇದನ್ನೂ ಓದಿ:ಪ್ರವಾಹ: ರಾಜ್ಯಕ್ಕೆ ₹ 1,869 ಕೋಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.