ADVERTISEMENT

ದಿ.ಸುರೇಶ ಅಂಗಡಿ ತಾಯಿ ನಿಧನ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 6:26 IST
Last Updated 11 ಮಾರ್ಚ್ 2021, 6:26 IST
ದಿವಂಗತ ಸುರೇಶ್‌ ಅಂಗಡಿ ಮತ್ತು ತಾಯಿ ಸೋಮವ್ವ ಅಂಗಡಿ ಅವರ ಅಪರೂಪದ ಚಿತ್ರ
ದಿವಂಗತ ಸುರೇಶ್‌ ಅಂಗಡಿ ಮತ್ತು ತಾಯಿ ಸೋಮವ್ವ ಅಂಗಡಿ ಅವರ ಅಪರೂಪದ ಚಿತ್ರ    

ಬೆಳಗಾವಿ: ಇಲ್ಲಿನ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿವಂಗತ ಸುರೇಶ ಅಂಗಡಿ ಅವರ ತಾಯಿ ಸೋಮವ್ವ ಅಂಗಡಿ (90) ಗುರುವಾರ ಬೆಳಿಗ್ಗೆ ನಿಧನರಾದರು.

ಸೋಮವ್ವ ಅಂಗಡಿ

ಅವರಿಗೆ ನಾಲ್ವರು ಪುತ್ರರು, ಪುತ್ರಿ, ಸೊಸೆಯಂದಿರು, ಅಳಿಯ ಹಾಗೂ ಮೊಮ್ಮಕ್ಕಳು ಇದ್ದಾರೆ.

ತಾಲ್ಲೂಕಿನ ಕೆ.ಕೆ. ಕೊಪ್ಪ ಗ್ರಾಮದವರಾದ ಅವರು ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಸುರೇಶ ಅಂಗಡಿ ಅವರು ಕೋವಿಡ್–19ನಿಂದಾಗಿ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ನಿಧನರಾದಾಗ, ವಯೋಸಹಜ ಕಾರಣದಿಂದಾಗಿ ಅಲ್ಲಿಗೆ ಹೋಗಲಾಗದೆ ಸೋಮವ್ವ ಬಹಳ ನೊಂದಿದ್ದರು. ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆಯಂತಹ ಪ್ರಮುಖ ಸಂದರ್ಭಗಳಲ್ಲಿ ಸುರೇಶ ಅವರು ತಾಯಿಯ ಆಶೀರ್ವಾದ ಪಡೆದು ಮುಂದಡಿ ಇಡುತ್ತಿದದ್ದರು. ಪ್ರೀತಿ ಪಾತ್ರನಾದ ಮಗನ ಅಂತಿಮ ದರ್ಶನ ಪಡೆಯಲು ಆಗಲಿಲ್ಲವಲ್ಲವೆಂದು ಕೊರಗುತ್ತಿದ್ದರು. ಅಂತ್ಯಕ್ರಿಯೆ ಸಂಜೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ADVERTISEMENT
ಪುತ್ರ ಸುರೇಶ್‌ ಅಂಗಡಿ ಅವರ ಸಾವಿನ ಸುದ್ದಿ ಕೇಳಿ ದುಃಖಿತರಾಗಿದ್ದ ಸೋಮವ್ವ ಅಂಗಡಿ (ಸಂಗ್ರಹ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.