ADVERTISEMENT

ಪ್ರಲ್ಹಾದ ಜೋಷಿ ವಿರುದ್ಧ ಕುತಂತ್ರ: ನಾರಾಯಣ ಭಾಂಡಗೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 15:49 IST
Last Updated 20 ಅಕ್ಟೋಬರ್ 2024, 15:49 IST
<div class="paragraphs"><p>ನಾರಾಯಣ ಭಾಂಡಗೆ</p></div>

ನಾರಾಯಣ ಭಾಂಡಗೆ

   

ಬೆಂಗಳೂರು: ಮೂಡಾ ಮತ್ತು ವಾಲ್ಮೀಕಿ ಹಗರಣ ಮರೆಮಾಚಲು ಕಾಂಗ್ರೆಸ್‌ ನಾಯಕರು ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರನ್ನು ಸಿಕ್ಕಿ ಹಾಕಿಸಲು ಕುತಂತ್ರ ನಡೆಸಿದ್ದಾರೆ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಕೆ.ಭಾಂಡಗೆ ಟೀಕಿಸಿದ್ದಾರೆ.

ಗೋಪಾಲ ಜೋಷಿ ಅವರ ಮೇಲೆ ಕೇಳಿ ಬಂದಿರುವ ಆರೋಪವನ್ನು ಮುಂದಿಟ್ಟುಕೊಂಡು ಪ್ರಲ್ಹಾದ ಜೋಷಿಯವರನ್ನು ಟೀಕೆ ಮಾಡುವುದು ಸರಿಯಲ್ಲ. ಕಳೆದ 30 ವರ್ಷಗಳಿಂದ ಪ್ರಲ್ಹಾದ ಜೋಷಿ ಮತ್ತು ಗೋಪಾಲ ಜೋಷಿಯವರ ಮಧ್ಯೆ ಯಾವುದೇ ಸಂಪರ್ಕ ಇಲ್ಲ. 2012 ರಲ್ಲಿಯೇ ಪ್ರಲ್ಹಾದ ಜೋಷಿಯವರು ಪತ್ರಿಕೆಗಳ ಮೂಲಕವೇ ಸ್ಪಷ್ಟನೆ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಈ ಎಲ್ಲ ಸತ್ಯ ವಿಚಾರವನ್ನು ಮುಚ್ಚಿಟ್ಟು ತಮ್ಮ ಮೇಲಿನ ಗಂಭೀರ ಆರೋಪವನ್ನು ಮರೆ ಮಾಚಲು ಇಂತಹ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಕಾಂಗ್ರೆಸ್‌ ನಾಯಕರ ಈ ಪ್ರವೃತ್ತಿ ಖಂಡನೀಯ’ ಎಂದು ಅವರು ಹೇಳಿದ್ದಾರೆ.

ಮೂಡಾ ಮತ್ತು ವಾಲ್ಮೀಕಿ ಹಗರಣಗಳು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಕೊರಳಿಗೆ ಉರುಳಾಗುವ ಸಾಧ್ಯತೆ ದಟ್ಟವಾಗಿದೆ. ಆದ್ದರಿಂದ ತಮ್ಮ ಸರ್ಕಾರದ ವಿರುದ್ಧ ಇರುವ ಗಂಭೀರ ಆರೋಪವನ್ನು ಮರೆ ಮಾಚಲು ಹಾಗೂ ಜನರ ದೃಷ್ಟಿಯನ್ನು ಬೇರೆ ಸೆಳೆಯಲು ಕುತಂತ್ರ ಮಾಡಿದ್ದಾರೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.