ಚಿಕ್ಕಮಗಳೂರು: ‘ಕಾಂಗ್ರೆಸ್‌ನಲ್ಲಿ ಬಂಡಾಯ ಎದ್ದರೆ ಆ ಸಂದರ್ಭದ ಅವಕಾಶವನ್ನು ಬಿಜೆಪಿ ಬಳಸಿಕೊಳ್ಳಲಿದೆ. ಸುಮ್ಮನಿರಲು ನಾವು ಸನ್ಯಾಸಿಗಳಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹೊಟ್ಟೆಯಲ್ಲಿ ಪರಸ್ಪರ ವಿರೋಧಗಳನ್ನು ಇಟ್ಟುಕೊಂಡು ಸರ್ಕಾರ ರಚಿಸಿರುವ ಎರಡು ಪಕ್ಷಗಳು ಒಳ್ಳೆಯ ಆಡಳಿತ ನೀಡಲು ಹೇಗೆ ಸಾಧ್ಯ? ಈ ಸರ್ಕಾರ ಉರುಳಬೇಕು ಎಂಬುದು ನಮ್ಮ ಬಯಕೆ ಮತ್ತು ರಾಜ್ಯದ ಜನತೆಯದ್ದೂ ಅದೇ ಆಗಿದೆ’ ಎಂದರು.
ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಎದ್ದ ಆಕ್ರೋಶ, ನಿಗಮ–ಮಂಡಳಿಗೆ ನೇಮಕ ಮಾಡಲಾಗದ ಅಸಮಾಧಾನಗಳು ಮೈತ್ರಿಯಲ್ಲಿ ಎಲ್ಲವೂ ಸರಿಯಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಈ ಸರ್ಕಾರವು ಉರುಳಿದರೆ ಸಂತೋಷಡುತ್ತೇವೆ. ಆ ದಿನಕ್ಕಾಗಿ ಕಾಯುತ್ತಿದ್ದೇವೆ’ ಎಂದು ಉತ್ತರಿಸಿದರು.
ಬಿಜೆಪಿಯ ಕೆಲ ಶಾಸಕರನ್ನು ಸೆಳೆಯುವ ಯತ್ನವನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಮಾಡಿದ್ದವು. ಅದಕ್ಕೆ ಅವಕಾಶ ಆಗಬಾರದು ಎಂದು ಮುನ್ನಚ್ಚರಿಕೆ ವಹಿಸಿದ್ದೇವೆ. ರಾಷ್ಟ್ರೀಯ ಪರಿಷತ್ ಸಭೆಗೆ ನವದೆಹಲಿಗೆ ತೆರಳಿದ್ದೆವು. ಅಷ್ಟರಲ್ಲಿ ಕಾಂಗ್ರೆಸ್‌ನಲ್ಲಿನ ರಾಜಕೀಯ ವಿದ್ಯಮಾನಗಳು ಗಮನಕ್ಕೆ ಬಂದವು. ಹೀಗಾಗಿ ಎಚ್ಚರಿಕೆ ವಹಿಸಿದೆವು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.