ಬೆಂಗಳೂರು: ‘ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿ ಅವರನ್ನು ಟೀಕೆಗೆ ಬಳಸಿಕೊಂಡಿರುವುದು ಅವರ ಹಿರಿತನ ಕುಗ್ಗಿಸಿದೆ. ರಾಜಕಾರಣದ ಕೆಸರನ್ನು ಆಧ್ಯಾತ್ಮಿಕ ತಪಸ್ವಿಗಳ ಮೇಲೆ ಎರಚುವುದು ಸಜ್ಜನಿಕೆ ಇಲ್ಲದ ವ್ಯಕ್ತಿತ್ವ ತೋರಿಸುತ್ತದೆ’ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತು ‘ಎಕ್ಸ್’ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ‘ಸಾಮಾಜಿಕ ವ್ಯವಸ್ಥೆಯಲ್ಲಿನ ಸುಧಾರಣೆಯ ಹಾದಿಯಲ್ಲಿನ ವ್ಯತ್ಯಾಸಗಳ ಕುರಿತು ಅಭಿಪ್ರಾಯಿಸುವುದೂ ಆಧ್ಯಾತ್ಮಿಕ ಮಾರ್ಗದರ್ಶಕರ ಸಿದ್ಧಾಂತದ ಭಾಗವೇ ಆಗಿದೆ’ ಎಂದು ಹೇಳಿದ್ದಾರೆ.
ರಾಜಕೀಯ ಓಲೈಕೆ ಮತ್ತು ಸುದ್ದಿಯಲ್ಲಿರಬೇಕೆಂಬ ತೆವಲಿನ ಕಾರಣಕ್ಕೆ ಹರಿಪ್ರಸಾದ್ ಅವರು ಬಳಸಿದ ಭಾಷೆ ಮತ್ತು ವ್ಯಾಖ್ಯಾನ ಮಠದ ಭಕ್ತರು ಮತ್ತು ಹಿಂದೂಗಳ ಮನಸ್ಸನ್ನು ವಿಚಲಿತಗೊಳಿಸಿದೆ. ಟೀಕೆ ವಾಪಸ್ ಪಡೆದು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.