ADVERTISEMENT

BJP ಟಿಕೆಟ್ ವಂಚನೆ ಪ್ರಕರಣ: 10ದಿನ ಸಿಸಿಬಿ ಪೊಲೀಸರ ಕಸ್ಟಡಿಗೆ ಹಾಲಶ್ರೀ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2023, 7:52 IST
Last Updated 20 ಸೆಪ್ಟೆಂಬರ್ 2023, 7:52 IST
<div class="paragraphs"><p>ಅಭಿನವ ಹಾಲಶ್ರೀ ಸ್ವಾಮೀಜಿ</p></div>

ಅಭಿನವ ಹಾಲಶ್ರೀ ಸ್ವಾಮೀಜಿ

   

ಬೆಂಗಳೂರು: ಬಿಜೆಪಿ ಟಿಕೆಟ್ ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಒಂದನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರು, 10 ದಿನಗಳ ಸಿಸಿಬಿ ಪೊಲೀಸರ ಕಸ್ಟಡಿಗೆ ನೀಡಿ ಆದೇಶಿಸಿದ್ದಾರೆ.

ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುವ ಆಮಿಷವೊಡ್ಡಿ ಒಂದೂವರೆ ಕೋಟಿ ಹಣ ಪಡೆದು ವಂಚಿಸಿದ ಆರೋಪದ ಮೇಲೆ ಸ್ವಾಮೀಜಿಯನ್ನು ನಿನ್ನೆ ಒಡಿಶಾದಲ್ಲಿ ಬಂಧಿಸಲಾಗಿತ್ತು. 

ADVERTISEMENT

ಚಾಮರಾಜಪೇಟೆ ಸಿಸಿಬಿ ಕಚೇರಿಯಲ್ಲಿ ಸ್ವಾಮೀಜಿ ವಿಚಾರಣೆ ನಡೆಯಲಿದೆ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ.

ಮಂಗಳವಾರ ರಾತ್ರಿಯೇ ವಿಮಾನದಲ್ಲಿ ಅವರನ್ನು ಬೆಂಗಳೂರಿಗೆ ಕರೆತಂದು ಆಡುಗೋಡಿಯ ಟೆಕ್ನಿ‌ಕಲ್ ಸೆಲ್‌ಗೆ ಕಳುಹಿಸಲಾಗಿತ್ತು.

ಸ್ವಾಮೀಜಿ ಅವರು ವೇಷ ಬದಲಾವಣೆ ಮಾಡಿಕೊಂಡು, ಒಡಿಶಾದಲ್ಲಿ ಓಡಾಟ ನಡೆಸುತ್ತಿದ್ದರು. ಮಾಹಿತಿ‌‌ ಮೇರೆಗೆ ಒಡಿಶಾಕ್ಕೆ ತೆರಳಿದ್ದ ಸಿಸಿಬಿ ತಂಡವು ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.