ಬೆಂಗಳೂರು: ಮೂಲತಃ ಸಮಾಜವಾದಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಧ್ವನಿ ಇಂದು ಬದಲಾಗಿದೆ. ಸುತ್ತಲೂ ಇರುವವರಿಂದ ಅವರು ಪ್ರಭಾವಿತರಾಗಿರಬಹುದು ಎಂದು ಕಾಂಗ್ರೆಸ್ ನಾಯಕ ಬಿ.ಎಲ್.ಶಂಕರ್ ಹೇಳಿದರು.
ಹಿಂದ್ ಮಜ್ದೂರ್ ಕಿಸಾನ್ ಪಂಚಾಯತ್ (ಎಚ್‌ಎಂಕೆಪಿ) ಅಧ್ಯಕ್ಷ ಮೈಕಲ್ ಫರ್ನಾಂಡೀಸ್ ಅವರ ಜನ್ಮದಿನದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ‘ಮೈಕಲ್–90’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
ರೈತ ನಾಯಕ ಎಂ.ಡಿ. ನಂಜುನಂಡಸ್ವಾಮಿ, ಫರ್ನಾಂಡಿಸ್ ಅವರ ಗರಡಿಯಲ್ಲಿ ಬೆಳೆದ ಸಿದ್ದರಾಮಯ್ಯನವರು ಸಮಾಜವಾದಿ ಹಿನ್ನೆಲೆಯಲ್ಲೇ ರಾಜಕೀಯ ನೆಲೆ ಕಂಡುಕೊಂಡವರು. ಈಗ ಅವರ ಮಾತು ಮೊದಲಿನಂತಿಲ್ಲ. ರಾಜಕೀಯ ಎಲ್ಲವನ್ನೂ ಕಲಿಸಿದೆ. ಸ್ಪಂದನೆ ಇಲ್ಲದ ಸ್ಥಿತಿಗೆ ತಲುಪಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.