ADVERTISEMENT

ಪದ್ಮರಾಜ ದಂಡಾವತಿ, ಹರೀಶ್ ಹಾಗಲವಾಡಿಗೆ ಬಿ.ಎಂ.ಶ್ರೀ. ಪ್ರತಿಷ್ಠಾನ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 22:20 IST
Last Updated 22 ಸೆಪ್ಟೆಂಬರ್ 2021, 22:20 IST
ಪದ್ಮರಾಜ ದಂಡಾವತಿ ಹಾಗೂ ಹರೀಶ್ ಹಾಗಲವಾಡಿ
ಪದ್ಮರಾಜ ದಂಡಾವತಿ ಹಾಗೂ ಹರೀಶ್ ಹಾಗಲವಾಡಿ   

ಬೆಂಗಳೂರು: ಬಿ.ಎಂ.ಶ್ರೀ ಪ್ರತಿಷ್ಠಾನ ಕೊಡಮಾಡುವ ‘ಶಾ. ಬಾಲೂರಾವ್ ಅನುವಾದ ಪ್ರಶಸ್ತಿ’ಗೆ ಪತ್ರಕರ್ತ ಪದ್ಮರಾಜ ದಂಡಾವತಿ ಅವರುಅನುವಾದಿಸಿದ ಕೃತಿ ‘ಸೀತಾ’ ಹಾಗೂ‘ಶಾ. ಬಾಲೂರಾವ್ ಯುವ ಬರಹಗಾರ ಪ್ರಶಸ್ತಿ’ಗೆ ಹರೀಶ್ ಹಾಗಲವಾಡಿ ಅವರ ‘ಋಷ್ಯಶೃಂಗ’ ಕೃತಿಆಯ್ಕೆಯಾಗಿದೆ.

2020ರಲ್ಲಿ ಮೊದಲ ಮುದ್ರಣಗೊಂಡ ಕೃತಿಗಳನ್ನು ಈ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ. ಅನುವಾದ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಪ್ರೊ.ಎಂ.ಎಸ್. ರಘುನಾಥ್ ಹಾಗೂ ಪ್ರೊ. ನಗರಗೆರೆ ರಮೇಶ್ ಇದ್ದರು.ಯುವ ಬರಹಗಾರರ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಡಾ. ಆನಂದರಾಮ ಉಪಾಧ್ಯ ಮತ್ತು ಡಾ.ಜಿ.ವಿ.ಆನಂದಮೂರ್ತಿ ಇದ್ದರು.ಈ ಪ‍್ರಶಸ್ತಿಗಳು ತಲಾ ₹ 25 ಸಾವಿರ ನಗದು, ಫಲಕವನ್ನು ಒಳಗೊಂಡಿವೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಆರ್. ಲಕ್ಷ್ಮೀನಾರಾಯಣ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT