ಬೆಂಗಳೂರು: ರಾಜ್ಯದಲ್ಲಿ ದತ್ತಾಂಶ ಕೇಂದ್ರ ಉದ್ಯಮಗಳ ಉತ್ತೇಜನಕ್ಕಾಗಿ ‘ಕರ್ನಾಟಕ ದತ್ತಾಂಶ ಕೇಂದ್ರ ನೀತಿ– 2022’ ಕ್ಕೆ ಸೋಮವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಈ ಮಾಹಿತಿ ನೀಡಿದರು. ದೇಶದಲ್ಲಿ ದತ್ತಾಂಶ ಕೇಂದ್ರ ಉದ್ಯಮ (ಡೇಟಾ ಸೆಂಟರ್ ಇಂಡಸ್ಟ್ರಿ) ಸ್ಥಾಪನೆಗೆ ಕರ್ನಾಟಕ ನೆಚ್ಚಿನ ತಾಣವಾಗಿದೆ. ದೇಶದ ದತ್ತಾಂಶ ಕೇಂದ್ರ ಉದ್ಯಮಗಳ ಪ್ರಮುಖ ಐದು ತಾಣಗಳಲ್ಲಿ ಬೆಂಗಳೂರು ಪ್ರಮುಖವಾದುದು ಎಂದು ಅವರು ಹೇಳಿದರು.
ಈ ನೀತಿಯನ್ನು 5 ವರ್ಷಗಳ ಅವಧಿಯಲ್ಲಿ ಜಾರಿ ಮಾಡಲಾಗುವುದು. ಇದಕ್ಕಾಗಿ ₹100.50 ಕೋಟಿ ಅಗತ್ಯವಿದೆ ಎಂದು ಹೇಳಿದ ಮಾಧುಸ್ವಾಮಿ, ಬಂಡವಾಳ ಸಹಾಯಧನ, ಭೂ ಸಹಾಯಧನ, ಹಸಿರು ಇಂಧನ ದರ ಮರುಪಾವತಿಯಂತಹ ಅಂಶಗಳನ್ನು ನೀತಿ ಒಳಗೊಂಡಿದೆ. ವಿದ್ಯುತ್ ದರ, ವಿದ್ಯುತ್ ಶುಲ್ಕ, ಮುದ್ರಾಂಕ ಶುಲ್ಕ, ಭೂಪರಿವರ್ತನೆ ಶುಲ್ಕ ಮುಂತಾದ ರಿಯಾಯ್ತಿಗಳನ್ನು ನೀಡಲು 5 ವರ್ಷಗಳಿಗೆ ₹1467.43 ಕೋಟಿ ಬೇಕಾಗುತ್ತದೆ ಎಂದರು.
ಹೊಸ ನೀತಿಯ ಮೂಲಕ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದತ್ತಾಂಶ ಕೇಂದ್ರ ಉದ್ಯಮಗಳ ಸ್ಥಾಪನೆಗೆ ಉತ್ತೇಜನ ನೀಡಲಾಗುವುದು. ಅಲ್ಲದೆ, ಈ ಉದ್ಯಮ ಬೆಳವಣಿಗೆಗೆ ಅನುಕೂಲವಾಗುವ ವ್ಯವಸ್ಥೆಯನ್ನೂ ರೂಪಿಸಲಾಗುವುದು. ಈ ಕ್ಷೇತ್ರದಲ್ಲಿನ ಹೂಡಿಕೆಗೆ ದೇಶದಲ್ಲಿ ಕರ್ನಾಟಕವೇ ಮೊದಲ ಆದ್ಯತೆ ಆಗುವಂತೆ ಪೂರಕ ವ್ಯವಸ್ಥೆ ಅಭಿವೃದ್ಧಿಪಡಿಸಲಾಗುವುದು ಎಂದರು.
ಕರ್ನಾಟಕವು ಜಾಗತಿಕ ದತ್ತಾಂಶ ಕೇಂದ್ರಗಳ ವ್ಯವಸ್ಥೆ ಮತ್ತು ಡಿಜಿಟಲ್ ಪೂರೈಕೆ ವ್ಯವಸ್ಥೆ ಭಾಗವಾಗಬೇಕು. ಇದಕ್ಕಾಗಿ ಸುಮಾರು ₹10 ಸಾವಿರ ಕೋಟಿ ಹೂಡಿಕೆ ನಿರೀಕ್ಷಿಸಲಾಗಿದೆ. 2025 ರ ವೇಳೆಗೆ 250 ಮೆ.ವ್ಯಾಟ್ ಸಾಮರ್ಥ್ಯದ ದತ್ತಾಂಶ ಕೇಂದ್ರಗಳ ಉದ್ಯಮ ರಾಜ್ಯದಲ್ಲಿ ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ದತ್ತಾಂಶ ಕೇಂದ್ರ ನೀತಿಗೆ ಒಪ್ಪಿಗೆ
ಬೆಂಗಳೂರು: ರಾಜ್ಯದಲ್ಲಿ ದತ್ತಾಂಶ ಕೇಂದ್ರ ಉದ್ಯಮಗಳ ಉತ್ತೇಜನಕ್ಕಾಗಿ ‘ಕರ್ನಾಟಕ ದತ್ತಾಂಶ ಕೇಂದ್ರ ನೀತಿ– 2022’ ಕ್ಕೆ ಸೋಮವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಈ ಮಾಹಿತಿ ನೀಡಿದರು. ದೇಶದಲ್ಲಿ ದತ್ತಾಂಶ ಕೇಂದ್ರ ಉದ್ಯಮ (ಡೇಟಾ ಸೆಂಟರ್ ಇಂಡಸ್ಟ್ರಿ) ಸ್ಥಾಪನೆಗೆ ಕರ್ನಾಟಕ ನೆಚ್ಚಿನ ತಾಣವಾಗಿದೆ. ದೇಶದ ದತ್ತಾಂಶ ಕೇಂದ್ರ ಉದ್ಯಮಗಳ ಪ್ರಮುಖ ಐದು ತಾಣಗಳಲ್ಲಿ ಬೆಂಗಳೂರು ಪ್ರಮುಖವಾದುದು ಎಂದು ಹೇಳಿದರು.
ಸಂಪುಟ ಸಭೆಯ ಪ್ರಮುಖ ತೀರ್ಮಾನ:
lಶಿಗ್ಗಾವಿಯಲ್ಲಿ ಜವಳಿ ಪಾರ್ಕ್ ಸ್ಥಾಪನೆಗೆ ₹25 ಕೋಟಿ ಅನುದಾನ
lಹಾವೇರಿ ಜಿಲ್ಲೆಯಲ್ಲಿ ಕೆರೆಗಳನ್ನು ತುಂಬಿಸಲು ₹105 ಕೋಟಿಗೆ ಅನುಮೋದನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.