ADVERTISEMENT

ನೀಟ್‌ ಅಕ್ರಮ ಶಂಕೆ: ವಿದ್ಯಾರ್ಥಿಗಳ ಹಿತ ಕಾಪಾಡಿ: ಎನ್‌.ಎಸ್‌. ಬೋಸರಾಜು

​ಪ್ರಜಾವಾಣಿ ವಾರ್ತೆ
Published 9 ಜೂನ್ 2024, 15:28 IST
Last Updated 9 ಜೂನ್ 2024, 15:28 IST
ನೀಟ್‌
ನೀಟ್‌   

ಬೆಂಗಳೂರು: ‘ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯಲ್ಲಿ (ನೀಟ್) ಅಕ್ರಮದ ಅನುಮಾನ ವ್ಯಕ್ತವಾಗಿದ್ದು, ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಹಿತ ಕಾಯಲು ಮುಂದಾಗಬೇಕು’ ಎಂದು ಸಚಿವ ಎನ್‌.ಎಸ್‌. ಬೋಸರಾಜು ಆಗ್ರಹಿಸಿದರು.

‘ನೀಟ್ ಫಲಿತಾಂಶ ಬಂದ ನಂತರ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು ಕೇಂದ್ರ ಇನ್ನಷ್ಟು ಅನಾಹುತಗಳಿಗೆ ಅವಕಾಶ ಆಗದಂತೆ ತನಿಖೆ ನಡೆಸಿ ನ್ಯಾಯ ಕೊಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ‘ಈ ಬಾರಿ ಆಶ್ಚರ್ಯಕರ ರೀತಿಯಲ್ಲಿ 67 ವಿದ್ಯಾರ್ಥಿಗಳು 720ಕ್ಕೆ 720 ಅಂಕ ಪಡೆದಿದ್ದು ಪ್ರತಿಷ್ಠಿತ ಏಮ್ಸ್‌ನಲ್ಲಿ ಲಭ್ಯ ಇರುವ ಪ್ರವೇಶಾತಿ ಸಂಖ್ಯೆಯೇ 56. ಉಳಿದ 11 ವಿದ್ಯಾರ್ಥಿಗಳ ಆಸೆ ಭಗ್ನವಾಗಲಿದೆ. ಈ ಹಿನ್ನಲೆಯಲ್ಲಿ ಪೋಷಕರು, ವಿದ್ಯಾರ್ಥಿಗಳು ಶಂಕೆ ವ್ಯಕ್ತಪಡಿಸಿದ್ದಾರೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಜೂನ್ 14ಕ್ಕೆ ಘೋಷಿಸಬೇಕಿದ್ದ ಫಲಿತಾಂಶವನ್ನು ಜೂನ್ 4ಕ್ಕೆ ಪ್ರಕಟಿಸಿರುವುದು ಶಂಕೆಗೆ ಕಾರಣವಾಗಿದೆ. ನೀಟ್ ಪರೀಕ್ಷೆಯಲ್ಲಿ ಋಣಾತ್ಮಕ ಅಂಕ ನೀಡುವ ಕ್ರಮ ಇದ್ದರೂ ಇಷ್ಟೊಂದು ವಿದ್ಯಾರ್ಥಿಗಳು ಶೇ 100 ಅಂಕ ಗಳಿಸಲು ಹೇಗೆ ಸಾಧ್ಯವಾಯಿತು ಎನ್ನುವುದು ಆಶ್ಚರ್ಯ ಮೂಡಿಸುತ್ತದೆ’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.