ADVERTISEMENT

ಸ್ವಾತಂತ್ರ್ಯೋತ್ಸವ ಭಾಷಣ| ನೆರೆ ಸಂತ್ರಸ್ತರ ನೆರವಿಗೆ ನಿಲ್ಲುವ ಘೋಷಣೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2019, 4:58 IST
Last Updated 15 ಆಗಸ್ಟ್ 2019, 4:58 IST
   

ಅತ್ತ ದೆಹಲಿಯಲ್ಲಿ ಮೋದಿ ಅವರು ಧ್ಜಜಾರೋಹಣ ನೆರವೇರಿಸಿ, ಭಾಷಣ ಮಾಡಿ ಮುಗಿಸುತ್ತಲೇ ಇತ್ತ, ಬೆಂಗಳೂರಿನ ಮಾಣೇಕ್‌ ಷಾ ಪರೇಡ್‌ ಮೈದಾನದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಧ್ಜಜಾರೋಹಣ ನೆರವೇರಿಸಿದರು. ನಂತರ ಅವರು ಭಾಷಣ ಆರಂಭಿಸಿದರು. ಭಾಷಣದ ಮುಖ್ಯಾಂಶಗಳು ಇಲ್ಲಿವೆ.

-ಅತಿವೃಷ್ಟಿ, ಅನಾವೃಷ್ಟಿ ಪರಿಸ್ಥಿತಿ ಎದುರಿಸಲು ಸರ್ಕಾರ ಸನ್ನದ್ಧವಾಗಿದೆ. ಅರ್ಧ ರಾಜ್ಯ ಈಗ ಜಲಪ್ರಳಯಕ್ಕೆ ಒಳಗಾಗಿದೆ. ಪ್ರವಾಹದಿಂದ ಈವರೆಗೆ 65 ಮಂದಿ ಸಾವಿಗೀಡಾಗಿದ್ದಾರೆ.

-ಪ್ರವಾಹದಲ್ಲಿಮೃತಪಟ್ಟವರ ಕುಟುಂಬದವರಿಗೆ ತಲಾ ₹5 ಲಕ್ಷದಂತೆ ಪರಿಹಾರ ನೀಡಲಾಗುತ್ತಿದೆ.ಈವರೆಗೆ 6.97 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. 859 ಜಾನುವಾರುಗಳು ಸಾವನ್ನಪ್ಪಿವೆ.

ADVERTISEMENT

-ಪ್ರವಾಹ ಸಂತ್ರಸ್ತರಿಗೆ ತಕ್ಷಣದ ನೆರವಿಗೆ ₹10 ಸಾವಿರ, ಮನೆ ಕಳೆದುಕೊಂಡವರಿಗೆ ₹5 ಲಕ್ಷ ಪರಿಹಾರ ಹಾಗೂ ಮನೆ ದುರಸ್ತಿ ಮಾಡಿಕೊಳ್ಳಲು 1 ಲಕ್ಷ ನೆರವು ನೀಡಲಾಗುವುದು.

-ಇತ್ತೀಚೆಗೆ ರಾಜ್ಯದಲ್ಲಿನ ಉದ್ಯೋಗಗಳಲ್ಲಿ ಕನ್ನಡಿಗರ ಪ್ರಾತಿನಿಧ್ಯ ಕಡಿಮೆಯಾಗುತ್ತಿದೆ ಎಂಬ ಕೂಗೆದ್ದಿದೆ. ರಾಜ್ಯದಲ್ಲಿನ ಉದ್ಯೋಗಗಳಲ್ಲಿ ಅಧಿಕಾಂಶ ಕನ್ನಡಿಗರಿಗೇ ದೊರೆಯಬೇಕೆಂಬುದು ನಮ್ಮ ನಿಲುವು. ನಮ್ಮ ಸರ್ಕಾರದ ನೀತಿಯೂ ಇದೇ ಆಗಿದೆ

-ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗೆ ಮೊದಲ ಕಂತಿನಲ್ಲಿ ತಲಾ ₹2,000 ಗಳನ್ನು ಒಂದು ಲಕ್ಷ ಅರ್ಹ ಫಲಾನುಭವಿಗಳ ಖಾತೆಗೆ ನೇರ ವರ್ಗಾವಣೆ ಮಾಡಲಾಗಿದೆ

-ಗ್ರಾಮೀಣಾಭಿವೃದ್ಧಿ ಮತ್ತು ನೀರಾವರಿಗೆ ಆದ್ಯತೆ.

-ರೈತರ ಆದಾಯ ದ್ವಿಗುಣಗೊಳಿಸಲು ಕೇಂದ್ರಕ್ಕೆ ಸಹಕಾರ ನೀಡಲಾಗುವುದು.

-ಕೈಗಾರಿಕೆಗಳ ಉತ್ತೇಜನ, ಕೌಶಲಾಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿ

-ಕೇಂದ್ರ ಸರ್ಕಾರವು ನಿಗದಿ ಪಡಿಸಿರುವ ಈಸ್ ಆಫ್ ಡ್ಯೂಯಿಂಗ್ ಬಿಸಿನೆಸ್ ಗುರಿಗಳಲ್ಲಿ ಶೇ 98ಕ್ಕೂ ಹೆಚ್ಚು ಸಾಧನೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಶೇ 100 ರಷ್ಟು ಗುರಿ ಸಾಧಿಸುವ ಮೂಲಕ ಹೂಡಿಕೆದಾರರನ್ನು ಆಕರ್ಷಿಸಲಾಗುವುದು.

-ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು.

-ಬೆಂಗಳೂರು ಅಭಿವೃದ್ಧಿ ಕಾರ್ಯಪಡೆಯನ್ನು ಬಲ ಪಡಿಸಲಾಗುವುದು

-ವಿದ್ಯುತ್ ಉತ್ಪಾದನೆಯಲ್ಲಿ ಅಗ್ರಪಂಕ್ತಿ ಕಾಯ್ದುಕೊಳ್ಳುವ ಮೂಲಕ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಕೈಗಾರಿಕೋದ್ಯಮಗಳಿಗೆ, ಕೃಷಿಗೆ ಅನಿರ್ಬಂಧಿತ ವಿದ್ಯುತ್ ಒದಗಿಸಲಾಗುವುದು.

-ಕೇಂದ್ರ ಸರ್ಕಾರವುಕಾಶ್ಮೀರವನ್ನುಕಪಿಮುಷ್ಟಿಯಿಂದ ಬಿಡುಗಡೆಗೊಳಿಸಿದೆ. ಸಂವಿಧಾನದ 370ನೇ ವಿಧಿಯ ಸೇರ್ಪಡೆಗೆ ಸ್ವಯಃ ಡಾ. ಬಿ‌.ಆರ್. ಅಂಬೇಡ್ಕರ್ ಅವರೇ ವಿರೋಧ ವ್ಯಕ್ತಪಡಿಸಿದ್ದರು. ದೇಶದ ಅಖಂಡತೆಗೆ ಇದರಿಂದ ಧಕ್ಕೆಯಾಗುವುದು ಎಂದು ಅವರು ಭಾವಿಸಿದ್ದರು.

-ಪ್ರಧಾನಿ ನರೇಂದ್ರ ಮೋದಿಯವರ ಈ ದಿಟ್ಟ ನಿರ್ಧಾರವನ್ನು ರಾಷ್ಟ್ರ ಮತ್ತು ವಿಶ್ವ ಸ್ವಾಗತಿಸಿವೆ. ಈ ಚರಿತ್ರಾರ್ಹ ನಿರ್ಧಾರದಿಂದ ಭಾರತೀಯ ಇತಿಹಾಸದಲ್ಲಿ ನರೇಂದ್ರ ಮೋದಿಯವರ ಹೆಸರು ಸುವರ್ಣಾಕ್ಷರಗಳಲ್ಲಿ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.