ADVERTISEMENT

ಕಾರವಾರಕ್ಕೆ ತಲುಪಿತು ಯೋಧ ವಿಜಯಾನಂದ ಸುರೇಶ ನಾಯ್ಕ ಪಾರ್ಥಿವ ಶರೀರ

​ಪ್ರಜಾವಾಣಿ ವಾರ್ತೆ
Published 11 ಜುಲೈ 2018, 4:13 IST
Last Updated 11 ಜುಲೈ 2018, 4:13 IST
   

ಕಾರವಾರ/ಖಾನಾಪುರ: ಛತ್ತೀಸ್‌ಗಡದ ಕಂಕೇರ್ ಜಿಲ್ಲೆಯ ಛೋಟೆ ಬೇಟಿಯಾ ಪ್ರದೇಶದಲ್ಲಿ ನಕ್ಸಲರು ಹೂತಿಟ್ಟಿದ್ದ ಸ್ಫೋಟಕ ಸಿಡಿದು ಮೃತಪಟ್ಟಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಯೋಧ ವಿಜಯಾನಂದ ಸುರೇಶ ನಾಯ್ಕ (29) ಅವರ ಪಾರ್ಥಿವ ಶರೀರವನ್ನು ಕಾರವಾರಕ್ಕೆ ತರಲಾಗಿದೆ.


ಜಿಲ್ಲಾಧಿಕಾರಿ ಎಸ್ ಎಸ್ ನಕುಲ್, ಶಾಸಕಿ ರೂಪಾಲಿ ನಾಯ್ಕ ಪುಷ್ಪಗುಚ್ಛವಿಟ್ಟು ಗೌರವ ಸಲ್ಲಿಸಿದರು. ಜಿಲ್ಲಾಧಿಕಾರಿ ಕಚೇರಿಯಿಂದ ಯೋಧನ ಮನೆಯಿರುವ ಕೋಮಾರಪಂಥ ವಾಡಾದವರೆಗೆ ಮೆರವಣಿಗೆಯಲ್ಲಿ ಮೃತದೇಹವನ್ನು ತೆಗೆದುಕೊಂಡು ಹೋಗಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT