ADVERTISEMENT

ಬಿಎಸ್‌ವೈ ಬರ ಅಧ್ಯಯನ| ಮೈತ್ರಿ ಸರ್ಕಾರದ ನಾಯಕ ಸಿದ್ದರಾಮಯ್ಯ ಕ್ಷೇತ್ರದಿಂದಲೇ ಆರಂಭ

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 6:52 IST
Last Updated 7 ಜೂನ್ 2019, 6:52 IST
   

ಬಾಗಲಕೋಟೆ: ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿಪ್ರತಿನಿಧಿಸುವಬಾದಾಮಿ ತಾಲ್ಲೂಕಿನ ಹಳಗೇರಿ ಹಾಗೂ ಮುಷ್ಠಿಗೇರಿಯಿಂದ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರುಶುಕ್ರವಾರ ತಮ್ಮ ಬರ ಅಧ್ಯಯನ ಪ್ರವಾಸ ಆರಂಭಿಸಲಿದ್ದಾರೆ.

ಯಡಿಯೂರಪ್ಪ ಮೊದಲಿಗೆ ಹಳಗೇರಿಯ ರಾಮನಗೌಡ ಪಾಟೀಲ ಅವರ ಒಣಗಿ ನಿಂತ ಬಾಳೆ ತೋಟವನ್ನು ವೀಕ್ಷಣೆ ಮಾಡಲಿದ್ದಾರೆ. ನಂತರ ಮುಷ್ಠಿಗೇರಿ ಹೊರವಲಯದ ಹೂಳು ತೆಗೆದ ಕೆರೆಯನ್ನು ಕೆಲ ಹೊತ್ತಿನಲ್ಲಿಯೇ ಯಡಿಯೂರಪ್ಪ ವೀಕ್ಷಣೆ ಮಾಡಲಿದ್ದಾರೆ. ಅವರ ಸ್ವಾಗತಕ್ಕೆ ಗ್ರಾಮಸ್ಥರು ಕಾದು ನಿಂತಿದ್ದಾರೆ.

ರಾಜ್ಯ ಸರ್ಕಾರದ ಕೆರೆ ಸಂಜೀವಿನಿ ಯೋಜನೆಯಡಿ ₹18 ಲಕ್ಷ ವೆಚ್ಚದಲ್ಲಿ ಮುಷ್ಠಿಗೇರಿಯ 15 ಎಕರೆ ವಿಸ್ತೀರ್ಣದ ಕೆರೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರು ಹೂಳು ತೆಗೆದಿದ್ದಾರೆ.

ADVERTISEMENT

‘ನಾವು ಗ್ರಾಮಸ್ಥರು ನೀಡಿದ ಸಹಕಾರದಿಂದ ₹18 ಲಕ್ಷದ ಬದಲಿಗೆ 12. ಲಕ್ಷದಲ್ಲಿಯೇ ಕೆಲಸ ಮುಗಿದಿದೆ. ಉಳಿದ ₹6 ಲಕ್ಷ ಸರ್ಕಾರದ ಖಾತೆಗೆ ಮರಳಿಸುವಂತೆ ಧರ್ಮಸ್ಥಳ ಸಂಸ್ಥೆಯವರು ಒತ್ತಾಯಿಸುತ್ತಿದ್ದಾರೆ. ಆ ಹಣವನ್ನು ಮರಳಿಸುವುದಿಲ್ಲ. ಅದೇ ದುಡ್ಡಿನಲ್ಲಿ ಕೆರೆ ದಂಡೆಯಲ್ಲಿ ಕಲ್ಲಿನ ಪಿಚ್ಚಿಂಗ್ ಮಾಡಿಸಿಕೊಡಲಿ' ಎಂದು ಕೆರೆ ಅಭಿವೃದ್ಧಿ ಸಂಘದ ಅಧ್ಯಕ್ಷ ನೀಲಕಂಠಗೌಡ ಪಾಟೀಲ ಒತ್ತಾಯಿಸಿದರು. ಈ ಬೇಡಿಕೆಯನ್ನು ಯಡಿಯೂರಪ್ಪ ಅವರ ಮುಂದೆಯೂ ಮಂಡಿಸಲಾಗುವುದು ಎಂದರು.

ವಿಶೇಷವೆಂದರೆ ಹಳಗೇರಿ, ಮುಷ್ಠಿಗೇರಿ ಸೇರಿದಂತೆ ಬಾದಾಮಿ ತಾಲ್ಲೂಕಿನಾದ್ಯಂತ ಗುರುವಾರ ರಾತ್ರಿ ಉತ್ತಮ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.