ADVERTISEMENT

ಉಪ ಚುನಾವಣೆ ಫಲಿತಾಂಶ: ಸಿಂದಗಿಯಲ್ಲಿ ಬಿಜೆಪಿ, ಹಾನಗಲ್‌ನಲ್ಲಿ ಕಾಂಗ್ರೆಸ್ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 5:24 IST
Last Updated 2 ನವೆಂಬರ್ 2021, 5:24 IST
   

ಹಾವೇರಿ/ವಿಜಯಪುರ: ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಬಿರುಸಿನಿಂದ ಸಾಗಿದೆ. ಬೆಳಗ್ಗೆ 10ರ ವೇಳೆ 5 ಸುತ್ತುಗಳ ಮತ ಎಣಿಕೆ ಮುಗಿದಿದೆ.

ಸಿಂದಗಿಯಲ್ಲಿ 5ನೇ ಸುತ್ತಿನ ಬಳಿಕಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗಿಂತ 9,751 ಮತಗಳ ಮುನ್ನಡೆ ಸಾಧಿಸಿದ್ದರು.

ಅಭ್ಯರ್ಥಿಗಳು ಪಡೆದ ಮತಗಳ ವಿವರ(5 ಸುತ್ತು ಸೇರಿ)

*ಅಶೋಕ ಮನಗೂಳಿ (ಕಾಂಗ್ರೆಸ್):13,563

ADVERTISEMENT

*ರಮೇಶ ಭೂಸನೂರ (ಬಿಜೆಪಿ):23,314

*ನಾಜಿಯಾ ಅಂಗಡಿ (ಜೆಡಿಎಸ್): 710

*ಡಾ.ಸುನೀಲ್ ಕುಮಾರ್ ಹೆಬ್ಬಿ(ಕರ್ನಾಟಕ ರಾಷ್ಟ್ರ ಸಮತಿ):199

*ಜಿಲಾನಿ ಗುಡುಸಾಬ ಮುಲ್ಲಾ(ಪಕ್ಷೇತರ):101

*ದೀಪಿಕಾ ಎಸ್.(ಪಕ್ಷೇತರ):100

*ನೋಟಾ:234

ಹಾನಗಲ್‌ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ತೀವ್ರ ಹನಾಹಣಿ ನಡೆದಿದೆ. ನಾಲ್ಕನೇ ಸುತ್ತಿನ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ 250ಮತಗಳ ಮುನ್ನಡೆ ಕಾಯ್ದುಕೊಂಡಿದ್ದರು.

ಹಾನಗಲ್ ಉಪಚುನಾವಣೆ: ಇದುವರೆಗಿನ ಒಟ್ಟು ಫಲಿತಾಂಶ (4 ಸುತ್ತು ಸೇರಿ)

ಬಿಜೆಪಿ- ಶಿವರಾಜ ಸಜ್ಜನರ- 17,769
ಕಾಂಗ್ರೆಸ್- ಶ್ರೀನಿವಾಸ ಮಾನೆ- 18,019
ಜೆಡಿಎಸ್- ನಿಯಾಜ್ ಶೇಖ್- 149

ಕಾಂಗ್ರೆಸ್ ಗೆ 250 ಮತಗಳ ಮುನ್ನಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.