ADVERTISEMENT

BJP, JDS ನಾಯಕರಿಗೂ ಮುಡಾ ನಿವೇಶನ: ಪಟ್ಟಿ ಬಿಡುಗಡೆ ಮಾಡಿದ ಸಚಿವ ಬೈರತಿ ಸುರೇಶ್‌

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 14:04 IST
Last Updated 26 ಜುಲೈ 2024, 14:04 IST
ಬೈರತಿ ಸುರೇಶ್‌ 
ಬೈರತಿ ಸುರೇಶ್‌    

ಬೆಂಗಳೂರು: ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ವಿರೋಧ ಪಕ್ಷಗಳ ನಾಯಕರಿಗೂ ಹಲವು ನಿವೇಶನಗಳನ್ನು ಮಂಜೂರು ಮಾಡಲಾಗಿದೆ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಮತ್ತವರ ಬೆಂಬಲಿಗರಿಗೆ ಹಲವು ನಿವೇಶನಗಳನ್ನು ಮಂಜೂರು ಮಾಡಲಾಗಿದೆ’ ಎಂದರು. ಈ ಸಂಬಂಧ ದಾಖಲೆಗಳನ್ನು ಮಾಧ್ಯಮಗೋಷ್ಠಿಯ ಮುಂದೆ ಇಟ್ಟರು. ವಿರೋಧ ಪಕ್ಷಗಳ ಯಾವೆಲ್ಲಾ ನಾಯಕರಿಗೆ, ಅವರ ಕುಟುಂಬದವರಿಗೆ ಮತ್ತು ಆಪ್ತರಿಗೆ ನಿವೇಶನಗಳನ್ನು ಮಂಜೂರು ಮಾಡಲಾಗಿದೆ ಎಂಬ ವಿವರ ಇದ್ದ ಪಟ್ಟಿಯನ್ನು ಓದಿ ಹೇಳಿದರು.

‘ಮುಡಾದಲ್ಲಿ ಹಗರಣ ನಡೆದಿಲ್ಲ. ವಿವಾದ ಅಲ್ಲದೇ ಇರುವುದನ್ನು ಕೃತಕವಾಗಿ ವಿವಾದವನ್ನಾಗಿಸಲು ಬಿಜೆಪಿ ಮತ್ತು ಜೆಡಿಎಸ್‌ ಯತ್ನಿಸುತ್ತಿದೆ. ಇದರ ಸಲುವಾಗಿಯೇ ಈ ಪಕ್ಷಗಳ ಸಂಸದರು ಸಂಸತ್ತಿನಲ್ಲೂ ಈ ವಿಚಾರವನ್ನು ಪ್ರಸ್ತಾಪಿಸುತ್ತಿದ್ದಾರೆ. ಆದರೆ, ಕರ್ನಾಟಕದ ಏಳೂವರೆ ಕೋಟಿ ಜನರಿಗೆ ಆಗಿರುವ ಅನ್ಯಾಯದ ಬಗ್ಗೆ ಇವರು ಸಂಸತ್ತಿನಲ್ಲಿ ಎಂದಿಗೂ ಪ್ರಶ್ನೆ ಎತ್ತಲಿಲ್ಲ’ ಎಂದರು.

ADVERTISEMENT

‘ಈ ವಿಚಾರದಲ್ಲಿ ವಿವಾದವನ್ನು ಹುಟ್ಟುಹಾಕುವ ಉದ್ದೇಶದಿಂದ ಈ ಎರಡೂ ಪಕ್ಷಗಳ ನಾಯಕರು ವಿಧಾನಸಭೆಯನ್ನು ತಮ್ಮ ರಾಜಕಾರಣಕ್ಕೆ ಬಳಸಿಕೊಂಡರು. ಈಗ ಸಂಸತ್ತನ್ನೂ ಹೀಗೆಯೇ ಬಳಸಿಕೊಳ್ಳುತ್ತಿದ್ದಾರೆ’ ಎಂದು ಆಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.