ADVERTISEMENT

ಸಿಎಎ, ಎನ್ಆರ್‌ಸಿ ದೇಶದ ಜನರ ವಿರುದ್ಧ: ಸೀತಾರಾಂ ಯೆಚೂರಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 10:49 IST
Last Updated 21 ಜನವರಿ 2020, 10:49 IST
ಸಿಪಿಎಂ ‌ಪಕ್ಷದ ರಾಷ್ಟ್ರೀಯ ನಾಯಕ ಸೀತಾರಾಂ ಯೆಚೂರಿ
ಸಿಪಿಎಂ ‌ಪಕ್ಷದ ರಾಷ್ಟ್ರೀಯ ನಾಯಕ ಸೀತಾರಾಂ ಯೆಚೂರಿ    

ಕಲಬುರ್ಗಿ: ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ಗಳು ದೇಶದ ಜನರ ವಿರುದ್ಧವಾಗಿವೆ. ಪೌರತ್ವ ಕಾಯ್ದೆಯನ್ನ ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಸಿಪಿಎಂ ‌ಪಕ್ಷದ ರಾಷ್ಟ್ರೀಯ ನಾಯಕ ಸೀತಾರಾಂ ಯೆಚೂರಿ ಸ್ಪಷ್ಟಪಡಿಸಿದರು.

ನಗರದಲ್ಲಿ ‌ನಡೆಯಲಿರುವ ಪೀಪಲ್ಸ್ ಫೋರಂನ ಸಿಎಎ ವಿರೋಧಿ ರಾಷ್ಟ್ರೀಯ ‌ಸಮಾವೇಶಕ್ಕೂ‌ ಮುನ್ನ ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ‌ಮಾತನಾಡಿದ ಅವರು, 'ನಾವು ಶಾಂತಿಯುತವಾಗಿ ಈ ಕಾಯ್ದೆ ವಿರುದ್ಧ ದಂಗೆ ಏಳುತ್ತೇವೆ. ಪೌರತ್ವ ಸಾಬೀತುಪಡಿಸಬೇಕಾದರೆ ಜನರು ಹತ್ತು ವರ್ಷ ಹಿಂದಕ್ಕೆ ಹೋಗಬೇಕಾಗುತ್ತದೆ. ಅದಕ್ಕಾಗಿ ಇಂದು ಕಲಬುರ್ಗಿಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಮೂರು ಕಾಯ್ದೆಗಳನ್ನ ವಾಪಸ್ ಪಡೆಯುವವರೆಗೆ ನಮ್ಮ ಹೋರಾಟ ನಿಲ್ಲಿಸುವುದಿಲ್ಲ. ದೇಶದ ಸಂವಿಧಾನದ ಮೇಲೆ ಬಿಜೆಪಿ ನೇತೃತ್ವದ ಸರ್ಕಾರ ನಿರಂತರ ದಾಳಿ ಮಾಡುತ್ತಿದೆ' ಎಂದು ‌ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT