ಬೆಂಗಳೂರು: ಟಿವಿ ಚಾನೆಲ್ ವೀಕ್ಷಣೆಗೆ ಹೊಸ ದರವನ್ನು ವಿಧಿಸಿರುವಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ನಿಯಮ ವಿರೋಧಿಸಿ ಜ.24ರಂದು ದಕ್ಷಿಣ ಭಾರತದಲ್ಲಿ ಕೇಬಲ್ ಜಾಲದ ಮೂಲಕ ನಡೆಯುವ ವಾಹಿನಿಗಳ ಪ್ರಸಾರ ಸ್ಥಗಿತಗೊಳ್ಳಲಿದೆ.
ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಟಿವಿ ಚಾನೆಲ್‌ಗಳ ಪ್ರಸಾರ ಸ್ಥಗಿತಗೊಳ್ಳಲಿದೆ.ದಕ್ಷಿಣ ಭಾರತ ಕೇಬಲ್ ನಿರ್ವಾಹಕರ ಸಂಘಟನೆ ವತಿಯಿಂದ ಪ್ರಸಾರ ಸ್ಥಗಿತಕ್ಕೆ ಕರೆ ನೀಡಲಾಗಿದೆ. ರಾಜ್ಯದಲ್ಲಿ ಕೇಬಲ್ ಸಂಪರ್ಕ ಪಡೆದಿರುವ 80 ಲಕ್ಷಕ್ಕೂ ಹೆಚ್ಚು ಟಿವಿಗಳು ಬಂದ್ ಆಗಲಿವೆ.
ಜ. 26ರಂದು ಉತ್ತರ ಭಾರತದ ಕೇಬಲ್ ಆಪರೇಟರ್‌ಗಳ ಸಂಘಟನೆ ಬಂದ್‌ಗೆ ಕರೆ ನೀಡಿದೆ ಎಂದು ನಗರದ ಸಿಟಿ ಕೇಬಲ್‌ನ ನಿರ್ವಾಹಕ ಕೃಷ್ಣಮೂರ್ತಿ ಭಟ್ ಮಾಹಿತಿ ನೀಡಿದರು.
‘ಈ ಮೊದಲು ನಗರ ಪ್ರದೇಶದ ಗ್ರಾಹಕರು ₹300 ಮತ್ತು ಗ್ರಾಮೀಣ ಭಾಗದ ಗ್ರಾಹಕರು ₹150 ನೀಡಿ ಸುಮಾರು 400 ಚಾನೆಲ್‌ಗಳನ್ನು ನೋಡುವ ಅವಕಾಶವಿತ್ತು. ಮುಂದೆ ತಮ್ಮ ಆಸಕ್ತಿಯ ಚಾನೆಲ್‌ಗಳಿಗೆ ಪ್ರತ್ಯೇಕ ದರ ಪಾವತಿಸಬೇಕಾಗುತ್ತದೆ. ಜತೆಗೆ ಶೇ 18ರಷ್ಟು ಜಿಎಸ್‌ಟಿಯನ್ನೂ ಪಾವತಿಸಬೇಕಾಗುತ್ತದೆ’ ಎಂದು ಕೇಬಲ್ ನಿರ್ವಾಹಕರೊಬ್ಬರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.