ADVERTISEMENT

‘ಈ ಹೊತ್ತಿಗೆ’ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 16:38 IST
Last Updated 22 ಅಕ್ಟೋಬರ್ 2024, 16:38 IST
   

ಬೆಂಗಳೂರು: ದೊಡ್ಡಕಲ್ಲಸಂದ್ರದ ‘ಈ ಹೊತ್ತಿಗೆ’ ಟ್ರಸ್ಟ್‌ 2025ನೇ ಸಾಲಿನ ಈ ಹೊತ್ತಿಗೆ ಪ್ರಶಸ್ತಿಗಳಿಗಾಗಿ ಹಸ್ತಪ್ರತಿಗಳನ್ನು ಆಹ್ವಾನಿಸಿದೆ.

ಲೇಖಕರು, ಕವಿಗಳು ಕನ್ನಡದ ಅಪ್ರಕಟಿತ ಕಥಾ ಸಂಕಲನ ಹಾಗೂ ಕವನ ಸಂಕಲನಗಳನ್ನು ಕಳುಹಿಸಿಕೊಡಬೇಕು. ಆಯ್ಕೆಯಾದ ಸಂಕಲನಗಳಿಗೆ ತಲಾ ₹10,000 ನಗದು ಬಹುಮಾನ ಒಳಗೊಂಡ ಪ್ರಶಸ್ತಿ ನೀಡಲಾಗುತ್ತದೆ.

ಕಥೆ, ಕವನಗಳು ಸ್ವತಂತ್ರವಾಗಿರಬೇಕು. ಅನುವಾದಿತ ಬರಹಗಳಿಗೆ ಅವಕಾಶವಿಲ್ಲ. ಕಥಾ ಸಂಕಲನ 8 ರಿಂದ 10 ಕಥೆಗಳು, ಕವನ ಸಂಕಲನ 35-40 ಕವನಗಳನ್ನು ಒಳಗೊಂಡಿರಬೇಕು. ಡಿಟಿಪಿ ಮಾಡಿಸಿ, ಬೈಂಡ್‌ ಮಾಡಿದ ಸಂಕಲನದ ಮೂರು ಪ್ರತಿಗಳನ್ನು ನವೆಂಬರ್‌ 20ರ ಒಳಗೆ ಕಳುಹಿಸಿಕೊಡಬೇಕು ಎಂದು ಸಂಸ್ಥೆ ಕೋರಿದೆ. ಮಾಹಿತಿಗೆ 9611782621 ಸಂಪರ್ಕಿಸಬಹುದು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.