ಬೆಂಗಳೂರು: ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ವಿದುಷಿ ನೀಲಾ ರಾಂಗೋಪಾಲ್ ಇಂದು ಬೆಳಗಿನ ಜಾವ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.
ತಮಿಳುನಾಡಿನ ಕುಂಭಕೋಣಂನಲ್ಲಿ 1935ರಲ್ಲಿ ಜನಿಸಿದ ವಿದುಷಿ ನೀಲಾ, ಮದುವೆಯ ಬಳಿಕ ಬೆಂಗಳೂರಿನಲ್ಲಿ ನೆಲೆಸಿದ್ದರು. ಉತ್ತಮ ಮನೋಧರ್ಮ, ವಿದ್ವತ್‌ಪೂರ್ಣ ಗಾಯನಕ್ಕೆ ಹೆಸರಾದ ನೀಲಾ, ಹಲವಾರು ಶಿಷ್ಯಂದಿರನ್ನು ತಯಾರು ಮಾಡಿದವರು.
ಪ್ರಜಾವಾಣಿ ಸಂದರ್ಶನ:
ಮದ್ರಾಸ್ ಮ್ಯೂಸಿಕ್ ಅಕಾಡೆಮಿ ನೀಡುವ ಸಂಗೀತ ಕಲಾಚಾರ್ಯ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ‘ಸಂಗೀತ ಕಲಾಶ್ರೀ’ ರಾಮಸೇವಾ ಮಂಡಳಿ ನೀಡುವ ಸಂಗೀತ ಚೂಡಾಮಣಿ.. ಇವೇ ಮುಂತಾದ ಪ್ರಶಸ್ತಿಗಳಿಗೆ ಭಾಜನರಾದ ಇವರು ಶಿಷ್ಯಂದಿರ ಪ್ರೀತಿಯ ‘ನೀಲಾ ಮಾಮಿ’ ಎಂದೇ ಹೆಸರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.