ADVERTISEMENT

ಗ್ರಾ.ಪಂ ಸೇವೆಗಳಿಗೆ ‘ಯುವ ಪೇ’: ಇಂಟರ್‌ನೆಟ್‌ ಇಲ್ಲದೆಯೂ ನಗದುರಹಿತ ಪಾವತಿ ಸಾಧ್ಯ

ವರುಣ ಹೆಗಡೆ
Published 22 ಫೆಬ್ರುವರಿ 2020, 2:03 IST
Last Updated 22 ಫೆಬ್ರುವರಿ 2020, 2:03 IST
ಸಾಮಾನ್ಯ ಫೋನ್‌ ಮೂಲಕ ಹಣ ಪಾವತಿ
ಸಾಮಾನ್ಯ ಫೋನ್‌ ಮೂಲಕ ಹಣ ಪಾವತಿ   

ಬೆಂಗಳೂರು: ಸ್ಮಾರ್ಟ್‌ ಫೋನ್‌ ಹಾಗೂ ಅಂತರ್ಜಾಲ ಸೌಲಭ್ಯ ಇಲ್ಲದಿದ್ದರೂ ಹಣ ಪಾವತಿಸುವ ಅವಕಾಶವನ್ನು ಕನ್ನಡಿಗರು ಆವಿಷ್ಕಾರ ಮಾಡಿದ್ದು, ಇದನ್ನು ರಾಜ್ಯ ಸರ್ಕಾರ ಆಯ್ದ ಗ್ರಾಮ ಪಂಚಾಯಿತಿಗಳಿಗೆ ಪ್ರಾಯೋಗಿಕವಾಗಿ ಪರಿಚಯಿಸಲಿದೆ.

ರಾಜ್ಯದಲ್ಲಿ6,021 ಗ್ರಾಮ ಪಂಚಾಯಿತಿಗಳಿದ್ದು, ಅಂತರ್ಜಾಲ ಸಂಪರ್ಕ ಸಮರ್ಪಕವಾಗಿ ಸಿಗದೇ ಇರುವುದರಿಂದ ಆಸ್ತಿ ತೆರಿಗೆ, ನೀರು, ವಿದ್ಯುತ್ ಸೇರಿದಂತೆ ವಿವಿಧ ಶುಲ್ಕ ಪಾವತಿಗೆ ನಾಗರಿಕರು ಸರತಿಯಲ್ಲಿ ಕಾಯಬೇಕಾಗಿದೆ.

ಕೆಲವು ವೇಳೆ ಸರ್ವರ್ ಸಮಸ್ಯೆಯಿಂದ ಅಲೆದಾಡಬೇಕು. ಈ ಸಮಸ್ಯೆಗಳಿಗೆ ಪರಿಹಾರ ವೆಂಬಂತೆಉದ್ಮ (ಯುಡಿಎಂಎ) ಟೆಕ್ನಲಾ
ಜಿಸ್‌ ಎಂಬ ನವೋದ್ಯಮವು ‘ಯುವ ಪೇ’ ಎಂಬ ಮೊಬೈಲ್‌ ಆ್ಯಪ್ ಅಭಿವೃದ್ಧಿಪಡಿಸಿದೆ. ಐಟಿ–ಬಿಟಿ ಇಲಾಖೆಯ ಎಲೆವೆಟ್‌ ಯೋಜನೆಯಡಿ ಈ ನವೋದ್ಯಮ ನೆರವು ಪಡೆದಿತ್ತು. ಈಗ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಪ್ರಾಯೋಗಿಕವಾಗಿ ರಾಜ್ಯದ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾಗೊಳಿಸಲು ಆದೇಶ ಹೊರಡಿಸಿದ್ದು, 4ಜಿ ವಿನಾಯಿತಿ ನೀಡಿದೆ.

ADVERTISEMENT

ಈ ಆ್ಯಪ್ ವ್ಯಾಲೆಟ್‌ನಲ್ಲಿ ಹಣ ಹಾಕಿಕೊಂಡಲ್ಲಿ ಇಂಟರ್‌ನೆಟ್‌ ಸಹಾಯವಿಲ್ಲದೆ ಮೊಬೈಲ್‌ ನಂಬರ್‌ ಅಥವಾ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಹಣವನ್ನು ವಿನಿಮಯ ಮಾಡಿಕೊಳ್ಳಬಹುದು. ಇಂಟರ್‌ನೆಟ್‌ ಸಂಪರ್ಕ ಹೊಂದಿದ್ದಲ್ಲಿ ಬ್ಯಾಂಕ್‌ ಅಕೌಂಟ್‌ಗಳಿಂದಲೂ ಹಣ ಪಾವತಿಸಬಹುದು.

ಜನರಲ್ಲಿ ಅರಿವು ಅಗತ್ಯ: ‘ಇಂಟರ್‌ನೆಟ್‌ ಸಂಪರ್ಕವಿದ್ದರೂ ಕೆಲವು ವೇಳೆ ಯುಪಿಐ ಆ್ಯಪ್‌ಗಳು ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಹೀಗಾಗಿಯೇ ನಗದು ರಹಿತ ಹಣ ಪಾವತಿಗೆ ದೇಶದಲ್ಲಿ ಅಷ್ಟಾಗಿ ಬೆಂಬಲ ಸಿಕ್ಕಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಇಂಟರ್‌ನೆಟ್‌ ಸಂಪರ್ಕವಿಲ್ಲದೆಯೂ ಹಣ ಪಾವತಿ ಮಾಡುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದೇವೆ’ ಎಂದು ಕಂಪನಿಯ ಸಂಸ್ಥಾಪಕ ಬಿ. ಪ್ರಶಾಂತ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಇಂಟರ್‌ನೆಟ್‌ ಬೇಕಿಲ್ಲ?
ವಿವಿಧ ಬಿಲ್‌ಗಳನ್ನು ಪಾವತಿಸಲುಗ್ರಾಮ ಪಂಚಾಯಿತಿಗಳಿಂದ ಸ್ವಯಂಚಾಲಿತ ಸಂದೇಶಗಳು ಮೊಬೈಲ್‌ ಸಂಖ್ಯೆಗೆ ಬರಲಿವೆ.ಸಾಮಾನ್ಯ ಫೋನ್‌ ಹೊಂದಿರುವವರು ನೇರವಾಗಿ ಹಣ ಪಾವತಿಸಲು ಅವಕಾಶವಿಲ್ಲ. ಆದರೆ,ಈ ಸಂದೇಶವನ್ನು ಸ್ಮಾರ್ಟ್‌ ಫೋನ್‌ ಹೊಂದಿರುವ ಮನೆಯ ಬೇರೆ ಸದಸ್ಯರು ಅಥವಾ ಸ್ನೇಹಿತರಿಗೆ ಕಳಿಸಿ, ಅದರ ಮೇಲೆ ಕ್ಲಿಕ್ಕಿಸಿದಲ್ಲಿ ಪಾವತಿಸಬೇಕಾದ ಮೊತ್ತ ಕಾಣಿಸಲಿದೆ. ಆ್ಯಪ್‌ ವಾಲೆಟ್‌ ಮೂಲಕ ಹಣ ಪಾವತಿಸಬಹುದು. ಕಂಪನಿಯುಕೆಲ ಅಂಗಡಿ ಮಾಲೀಕರನ್ನು ಏಜೆಂಟ್‌ಗಳನ್ನಾಗಿ ಗುರುತಿಸಲಿದೆ. ಅಲ್ಲಿಯೂ ಸಂದೇಶ ವರ್ಗಾಯಿಸಿ,ಹಣ ಪಾವತಿಸಬಹುದು. ಪ್ರತಿ ವಹಿವಾಟಿಗೂ ಒಟಿಪಿ ಸಂಖ್ಯೆ ನಮೂದಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.