ಮಡಿಕೇರಿ: ಜೀವನದಿ ಕಾವೇರಿ ತೀರ್ಥೋದ್ಭವವು ಅ.18ರ ಶುಕ್ರವಾರ ನಡೆಯಲಿದೆ. ಅಂದು ಮುಂಜಾನೆ 12.59ಕ್ಕೆ ಸಲ್ಲುವ ಕರ್ಕಾಟಕ ಲಗ್ನದಲ್ಲಿ ಕಾವೇರಿ ‘ತೀರ್ಥೋದ್ಭವ’ಕ್ಕೆ ಸಮಯ ನಿಗದಿಯಾಗಿದೆ.
ಈ ಪುಣ್ಯಕಾಲದಲ್ಲಿ ಕಾವೇರಿಯು ತೀರ್ಥರೂಪಿಣಿ ಆಗಿ ಭಕ್ತರಿಗೆ ಒಲಿಯಲಿದ್ದಾಳೆ. ಪ್ರತಿವರ್ಷ ತೀರ್ಥೋದ್ಭವದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಜಿಲ್ಲೆ ಹಾಗೂ ತಮಿಳುನಾಡು– ಕೇರಳ ರಾಜ್ಯದಿಂದಲೂ ಭಕ್ತರು ಆಗಮಿಸುತ್ತಾರೆ. ಕೊಡಗಿನಲ್ಲಿ ಕಾವೇರಿ ತೀರ್ಥ ಕೊಂಡೊಯ್ದು ಮನೆ ಮನೆಗೆ ವಿತರಿಸುವ ಸಂಪ್ರದಾಯ ಇದೆ.
ಇದೇ ತಿಂಗಳ 27ರಂದು ಬೆಳಿಗ್ಗೆ 9.15ಕ್ಕೆ ತುಲಾ ಲಗ್ನದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವ ಮೂಲಕ ಕಾವೇರಿ ಜಾತ್ರೆಗೆ ಚಾಲನೆ ದೊರೆಯಲಿದೆ. ಬಳಿಕ, ಒಂದು ತಿಂಗಳು ಕೊಡಗಿನಲ್ಲಿ ಜಾತ್ರೆ ಸಂಭ್ರಮ ಮನೆಮಾಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.