ಕಲಬುರ್ಗಿ: ‘ಸಿಬಿಐನಲ್ಲಿ ನಡೆದ ಭ್ರಷ್ಟಾಚಾರ ಬಹಿರಂಗಗೊಳ್ಳುತ್ತಲೇ ಪ್ರಧಾನಿ ಕಚೇರಿಯ ಹುಳುಕುಗಳು ಹೊರ ಬೀಳುತ್ತಿವೆ. ಸಿಬಿಐ ಕಚೇರಿಗೆ ಕೇಂದ್ರ ಸರ್ಕಾರ ಬೀಗ ಹಾಕಿದೆ. ಕೆಲವು ಅಧಿಕಾರಿಗಳನ್ನು ಬದಲು ಮಾಡಿದ್ದು, ಕೆಲವರನ್ನು ನಿರ್ಬಂಧಿತ ರಜೆಯಲ್ಲಿ ತೆರಳುವಂತೆ ಆದೇಶ ನೀಡಿದೆ. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದರೆ ಭ್ರಷ್ಟಾಚಾರದಲ್ಲಿ ಪ್ರಧಾನಿ ಕಚೇರಿಗೂ ಮತ್ತು ಸಿಬಿಐ ಅಧಿಕಾರಿಗಳ ಮಧ್ಯೆ ಸಂಬಂಧವಿರುವಂತೆ ಕಂಡು ಬರುತ್ತಿದೆ’ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
‘ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಪ್ರಧಾನಿ ನರೇಂದ್ರ ಮೋದಿ ಅವರ ಪರಮಾಪ್ತ. ಮೋದಿಯೇ ಖುದ್ದು ಆಸಕ್ತಿ ವಹಿಸಿ ಅವರನ್ನು ನೇಮಕ ಮಾಡಿದ್ದರು. ಸಿಬಿಐನಲ್ಲಿರುವ ಹಲವು ಅಧಿಕಾರಿಗಳು ಭ್ರಷ್ಟಾಚಾರ ನಡೆಸುವ ಮೂಲಕ ಸಂಸ್ಥೆಗೆ ಕೆಟ್ಟ ಹೆಸರು ತಂದಿದ್ದಾರೆ. ಇದಕ್ಕೆ ಮೋದಿಯೇ ಕಾರಣ’ ಎಂದು ಆಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.