ಬೆಂಗಳೂರು: ಡ್ರಗ್ಸ್ ಜಾಲ ಪ್ರಕರಣದ ಆರೋಪಿಗಳ ರಕ್ತ ಪರೀಕ್ಷೆಗೆ ನ್ಯಾಯಾಲಯ ಅನುಮತಿ ನೀಡಿದ್ದು, ಸಿಸಿಬಿ ಪೊಲೀಸರು ಬುಧವಾರ ಇಬ್ಬರು ಆರೋಪಿಗಳನ್ನು ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆಗೆ ಒಳಪಡಿಸಿದರು.
ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಅವರನ್ನು ನಗರದ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಸಿಸಿಬಿ ಪೊಲೀಸರುಬುಧವಾರವೂ ವಿಚಾರಣೆ ನಡೆಸಿದರು. ಇವರಿಬ್ಬರನ್ನು ಗುರುವಾರ ರಕ್ತ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆ ಇದೆ.
‘ಆರೋಪಿಗಳು ಡ್ರಗ್ಸ್ ವ್ಯಸನಿಗಳೆಂಬ ಪುರಾವೆಗಳು ಸಿಕ್ಕಿವೆ. ಇದಕ್ಕಾಗಿ ನ್ಯಾಯಾಲಯದ ಅನುಮತಿ ಪಡೆದು ರಕ್ತ ಪರೀಕ್ಷೆ ಮಾಡಿಸಲಾಗುತ್ತಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.
ಮಹಿಳಾ ಇನ್‌ಸ್ಪೆಕ್ಟರ್ ಸಮ್ಮುಖದಲ್ಲಿ ವಿಚಾರಣೆ: ಸಾಂತ್ವನ ಕೇಂದ್ರದ ಪ್ರತ್ಯೇಕ ಕೊಠಡಿಯಲ್ಲಿ ನಟಿಯರನ್ನು ಇರಿಸಲಾಗಿದೆ. ಸಿಸಿಬಿ ಪೊಲೀಸರು, ಬುಧವಾರ ಬೆಳಿಗ್ಗೆಯಿಂದ ಸಂಜೆವ ರೆಗೂ ಇವರ ವಿಚಾರಣೆ ನಡೆಸಿದರು.
‘ತಮಗೂ ಡ್ರಗ್ಸ್ ಮಾರಾಟ ಜಾಲಕ್ಕೂ ಸಂಬಂಧವಿಲ್ಲವೆಂದು ನಟಿಯರು ಹೇಳುತ್ತಿದ್ದಾರೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.
‘ನಟಿಯರ ವರ್ತನೆಯಲ್ಲಿ ಬದಲಾವಣೆ ಆಗುತ್ತಿದೆ. ರಕ್ತ ಪರೀಕ್ಷೆಯಿಂದಲೇ ನಿಖರ ಮಾಹಿತಿ ಸಿಗಬೇಕಿದೆ’ ಎಂದು ತಿಳಿಸಿದರು.
ಮನೆ ಕೆಲಸದವರ ವಿಚಾರಣೆ: ಸಿಸಿಬಿ ಪೊಲೀಸರು, ನಟಿಯರ ಮನೆ ಕೆಲಸದವರನ್ನು ಬುಧವಾರ ವಿಚಾರಣೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.