ADVERTISEMENT

ಅಲ್‌ ಕೈದಾ’ ಸೇರಲು ಸಿದ್ಧತೆ; ಇಬ್ಬರನ್ನು ವಿಚಾರಣೆ ನಡೆಸಿದ ಸಿಸಿಬಿ ಪೊಲೀಸ್

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 21:15 IST
Last Updated 4 ಆಗಸ್ಟ್ 2022, 21:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಅಲ್‌ ಕೈದಾ ಉಗ್ರ ಸಂಘಟನೆ ಸೇರಲು ಹೊರಟಿದ್ದ ಪಶ್ಚಿಮ ಬಂಗಾಳದ ಅಬ್ದುಲ್ ಅಲೀಂ ಮಂಡಲ್‌ ಜೊತೆ ಒಡನಾಟವಿಟ್ಟುಕೊಂಡಿದ್ದ ಸ್ನೇಹಿತ ಅಬು ಸೈಯದ್‌ನನ್ನು ನಗರದ ಸಿಸಿಬಿ ಪೊಲೀಸರು ವಿಚಾರಣೆ ಮಾಡಿದ್ದಾರೆ.

ತಮಿಳುನಾಡಿನ ಸೇಲಂನ ಗಾರ್ಮೆಂಟ್ಸ್ ಕಾರ್ಖಾನೆಯೊಂದರ ಕಾರ್ಮಿಕ ಅಬ್ದುಲ್‌ ಅಲೀಂನನ್ನು ಈಚೆಗೆ ಸಿಸಿಬಿ ಪೊಲೀಸರು ಬಂಧಿಸಿದ್ದರು. ಈತನ ವಿಚಾರಣೆ ವೇಳೆ ಸಿಕ್ಕ ಮಾಹಿತಿ ಆಧರಿಸಿ ತಂಡ ಕೊಲ್ಕತ್ತಗೆ ಹೋಗಿದೆ.

‘ಅಲ್‌ ಕೈದಾ ಸಂಘಟನೆ ಸೇರಲು ಹೊರಟಿದ್ದ ಅಬ್ದುಲ್‌ ಅಲೀಂ ಜೊತೆ ಸೈಯದ್ ಹೆಚ್ಚು ಮಾತನಾಡುತ್ತಿದ್ದ. ಅಬು ಸೈಯದ್ ಸಹ ಅಲ್‌ ಕೈದಾ ಸಂಘಟನೆ ಸೇರಲು ಇಚ್ಛಿಸಿರುವ ಮಾಹಿತಿ ಇತ್ತು.
ಹೀಗಾಗಿ, ಕೊಲ್ಕತ್ತದಲ್ಲಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಆರೋಪಕ್ಕೆ ಸಂಬಂಧಿಸಿ ಪುರಾವೆಗಳು ಸಿಗದ ಕಾರಣ ವಿಚಾರಣೆ ಬಳಿಕ ಅಬು ಸೈಯದ್‌ನನ್ನು ಬಿಡಲಾಗಿದೆ’ ಎಂದು ಮೂಲಗಳು ಹೇಳಿವೆ.

ADVERTISEMENT

‘ಶಂಕಿತ ಅಬ್ದುಲ್ ಅಲೀಂ, ಸಾಮಾಜಿಕ ಮಾಧ್ಯಮಗಳ ಮೂಲಕ ಅಲ್‌ಕೈದಾ ಉಗ್ರರನ್ನು ಸಂಪರ್ಕಿಸುತ್ತಿದ್ದ. ಇದಕ್ಕೆ ಅಬು ಸೈಯದ್ ಸಹಾಯ ಮಾಡುತ್ತಿದ್ದ’ ಎಂದು ಮೂಲಗಳುತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.