ADVERTISEMENT

ಶತಾಯುಷಿಯಾದ ಸೀತವ್ವ: ಕುಟುಂಬದಿಂದ ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 13:04 IST
Last Updated 6 ಡಿಸೆಂಬರ್ 2020, 13:04 IST
ನಾಪೋಕ್ಲುಸಮೀಪದ ಕಕ್ಕಬ್ಬೆಯ ಮುತ್ತವ್ವ ಸಭಾಂಗಣದಲ್ಲಿ.ಸೀತವ್ವ ಗಣಪತಿ ಶತಾಯುಷಿಯಾದ ಸಂಭ್ರಮ ಆಚರಿಸಿದ ಕೇಟೋಳಿರ ಕುಟುಂಬಸ್ಥರು..
ನಾಪೋಕ್ಲುಸಮೀಪದ ಕಕ್ಕಬ್ಬೆಯ ಮುತ್ತವ್ವ ಸಭಾಂಗಣದಲ್ಲಿ.ಸೀತವ್ವ ಗಣಪತಿ ಶತಾಯುಷಿಯಾದ ಸಂಭ್ರಮ ಆಚರಿಸಿದ ಕೇಟೋಳಿರ ಕುಟುಂಬಸ್ಥರು..   

ನಾಪೋಕ್ಲು: ಸಮೀಪದ ಕಕ್ಕಬ್ಬೆ ನಾಲಡಿ ಗ್ರಾಮದ ಕೇಟೋಳಿರ ಸೀತವ್ವ ಗಣಪತಿ ಶತಾಯುಷಿಯಾದ ಹಿನ್ನೆಲೆಯಲ್ಲಿ ಕೇಟೋಳಿರ ಕುಟುಂಬಸ್ಥರು ಕಕ್ಕಬ್ಬೆಯ ಮುತ್ತವ್ವ ಸಭಾಂಗಣದಲ್ಲಿ ಸೀತವ್ವ ಅವರ ನೂರನೇ ವರ್ಷದ ಹುಟ್ಟುಹಬ್ಬವನ್ನು ಭಾನುವಾರ ವಿಜೃಂಭಣೆಯಿಂದ ಆಚರಿಸಿದರು.

ಕರಡ ಗ್ರಾಮದ ಮೇಪಾಡಿಯಂಡ ದಿ.ಮಂದಣ್ಣ ಸುಬವ್ವ ಅವರ ಐವರು ಮಕ್ಕಳಲ್ಲಿ ಕಿರಿಯ ಪುತ್ರಿಯಾದ ಸೀತವ್ವ 1920ರಲ್ಲಿ ಜನಿಸಿದರು. ಇವರ ವಿವಾಹವು 1941ರಲ್ಲಿ ನಾಲಡಿ ಗ್ರಾಮದ ಕೆಟೋಳಿರ ಗಣಪತಿ ಅವರೊಂದಿಗೆ ನೆರವೇರಿತು.

ಸೀತವ್ವ ಗಣಪತಿ ಅವರಿಗೆ 9 ಜನ ಮಕ್ಕಳಿದ್ದು, 5 ಗಂಡು ಮತ್ತು 4 ಹೆಣ್ಣು ಮಕ್ಕಳು. ಗಣಪತಿ ತಮ್ಮ 45ನೇ ವಯಸ್ಸಿನಲ್ಲಿ ಮೃತರಾಗಿದ್ದು ಸಂಸಾರದ ಜವಾಬ್ದಾರಿ ಹೊತ್ತ ಸೀತವ್ವ ನೂರು ವರ್ಷ ಪೂರೈಸಿದರು. ಇವರ ಕುಟುಂಬದಲ್ಲಿ ಮಕ್ಕಳು ಸೊಸೆಯಂದಿಯರು, ಮೊಮ್ಮಕ್ಕಳು, ಮರಿ ಮಕ್ಕಳು ಸೇರಿದಂತೆ ಒಟ್ಟು 67 ಜನರು ಇದ್ದಾರೆ.

ADVERTISEMENT

ಕುಟುಂಬದ ಪರವಾಗಿ ಕೆಟೋಳಿರ ಕುಟ್ಟಪ್ಪ ನೂರು ವರ್ಷ ಪೂರೈಸಿದ ಸೀತವ್ವ ಅವರಿಗೆ ಶುಭ ಹಾರೈಸಿದರು. ಮಗ ಅಪ್ಪಣ್ಣ, ಮೊಮ್ಮಗ ಕದ್ದಣ್ಣಿಯಂಡ ಹರೀಶ್ ಬೋಪಣ್ಣ ಮಾತನಾಡಿದರು.

ಶತಾಯುಷಿ ಸೀತವ್ವ ಕುಟುಂಬದ ಮತ್ತು ನಾಡಿನ ಎಲ್ಲರೂ ಆರೋಗ್ಯದಿಂದ ಇರಲಿ ಎಂದು ಹಾರೈಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.