ಮೈಸೂರು: ದೇವಸ್ಥಾನಗಳಲ್ಲಿ ನೀಡುತ್ತಿರುವ ಪ್ರಸಾದದ ಗುಣಮಟ್ಟಕ್ಕೆ ಮಾನದಂಡಗಳನ್ನು ನಿಗದಿಪಡಿಸುವಂತೆ ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಸಲ್ಲಿಸಿದ್ದ ಪ್ರಸ್ತಾವವನ್ನು ಆಹಾರ ಸಂರಕ್ಷಣಾ ಮತ್ತು ಮಾನದಂಡ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ತಿರಸ್ಕರಿಸಿದೆ.
ಸಿಎಫ್‌ಟಿಆರ್‌ಐ ಹಿರಿಯ ವಿಜ್ಞಾನಿಗಳ ತಂಡವು ಈ ಕುರಿತು ನವದೆಹಲಿಯಲ್ಲಿರುವ ಎಫ್‌ಎಸ್‌ಎಸ್‌ಎಐ ಕಚೇರಿಗೆ ಅಕ್ಟೋಬರ್‌ನಲ್ಲಿ 30 ಪುಟಗಳ ಪ್ರಸ್ತಾವ ಸಲ್ಲಿಸಿತ್ತು. ಪ್ರಸಾದದ ಗುಣಮಟ್ಟ ಮಾತ್ರವಲ್ಲದೇ; ಲಡ್ಡು, ಕಜ್ಜಾಯ, ಪಾಯಸಕ್ಕೆ ಬಳಸುವಪದಾರ್ಥಗಳ ಶೇಖರಣೆಯಲ್ಲೂ ಗುಣಮಟ್ಟದ ನಿಯಮಗಳನ್ನು ಅಳವಡಿಸಿಕೊಳ್ಳಬೇಕು ಎಂಬ ಕೋರಿಕೆಗೂ ಮನ್ನಣೆ ಸಿಕ್ಕಿಲ್ಲ.
‘ಗುಣಮಟ್ಟದ ಪ್ರಸಾದ ವಿತರಣೆಗೆ ದೇಶದಾದ್ಯಂತ ಯಾವುದೇ ಮಾನದಂಡ ನಿಗದಿಪಡಿಸಿಲ್ಲ. ಈ ಕುರಿತು ನಿಯಂತ್ರಣಾ ವಿಧಾನಗಳನ್ನೂ ಪಾಲಿಸುತ್ತಿಲ್ಲ. ಹೀಗಾಗಿ, ದೇಶದ ಪ್ರಮುಖ ದೇವಸ್ಥಾನಗಳಲ್ಲಿ ಪ್ರಸಾದಕ್ಕಾಗಿ ಬಳಸುವ ಪದಾರ್ಥಗಳ ನಿರ್ವಹಣೆ, ತಿನಿಸುಗಳ ತಯಾರಿಕೆ, ಯಾಂತ್ರೀಕರಣಕ್ಕೆ ಆದ್ಯತೆ ನೀಡುವ ಸಲುವಾಗಿ ಯೋಜನೆಯನ್ನು ಸಿದ್ಧಪಡಿಸಿ ಸಲ್ಲಿಸಲಾಗಿತ್ತು’ ಎಂದು ಸಿಎಫ್‌ಟಿಆರ್‌ಐ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿದವು.
ಹಲವು ದೇವಸ್ಥಾನಗಳಲ್ಲಿ ನೀಡುತ್ತಿರುವ ಪ್ರಸಾದದ ಗುಣಮಟ್ಟ ಉತ್ತಮವಾಗಿಲ್ಲ. ಆರೋಗ್ಯಕ್ಕೆಮಾರಕವಾಗುವಂತಹ ಆಹಾರ ಸಿದ್ಧವಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಪರಿಶೀಲನೆಗೆ ವಿರೋಧ: ದೇವಸ್ಥಾನಗಳಲ್ಲಿ ನೀಡುವ ಪ್ರಸಾದಕ್ಕೆಪಾವಿತ್ರ್ಯದ ಲೇಪವೂ ಇರುವುದರಿಂದ ಬಾಹ್ಯ ಸಂಸ್ಥೆಗಳಿಂದ ಗುಣಮಟ್ಟ ಪರಿಶೀಲನೆಗೆ ವಿರೋಧ ವ್ಯಕ್ತವಾಗಿದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.