ADVERTISEMENT

ಸಿಇಟಿ: 13,653 ಎಂಜಿನಿಯರಿಂಗ್‌ ಸೀಟು ಉಳಿಕೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 16:02 IST
Last Updated 10 ಅಕ್ಟೋಬರ್ 2024, 16:02 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಎರಡನೇ ಸುತ್ತಿನ ಮುಂದುವರಿದ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಣೆ ನಂತರವೂ 13,653 ಎಂಜಿನಿಯರಿಂಗ್‌ ಸೀಟುಗಳು ಉಳಿದಿವೆ.

ಎಂಜಿನಿಯರಿಂಗ್‌, ಕೃಷಿ, ಪಶುವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ 1,11,294 ಸೀಟುಗಳಲ್ಲಿ 85,259 ಸೀಟುಗಳು ಹಂಚಿಕೆಯಾಗಿವೆ. 26,036 ಸೀಟು ಉಳಿದಿವೆ. ಎಂಜಿನಿಯರಿಂಗ್‌ನ 79,907 ಸೀಟುಗಳಲ್ಲಿ 66,254 ಸೀಟುಗಳು ಹಂಚಿಕೆಯಾಗಿವೆ. ಸಿವಿಲ್‌, ಮೆಕ್ಯಾನಿಕಲ್‌, ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಹೆಚ್ಚು ಸೀಟುಗಳು ಉಳಿದಿವೆ ಎಂದು  ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌. ಪ್ರಸನ್ನ ಹೇಳಿದ್ದಾರೆ.

ADVERTISEMENT

ಫಾರ್ಮಸಿ ವಿಭಾಗದಲ್ಲಿ 401, ಯೋಗ ನ್ಯಾಚುರೋಪತಿ 125, ಕೃಷಿ (ಪ್ರಾಕ್ಟಿಕಲ್‌) 134 ಸೀಟುಗಳು ಹಂಚಿಕೆಗೆ ಬಾಕಿ ಇವೆ. ಎರಡನೇ ಮುಂದುವರಿದ ಸುತ್ತಿನಲ್ಲಿ ಸರ್ಕಾರಿ ಕೋಟಾದ ಸೀಟುಗಳನ್ನು ಮಾತ್ರ‌ ಕೆಇಎ ಮೂಲಕ ಹಂಚಿಕೆ ಮಾಡಲಾಗಿದೆ. ಸರ್ಕಾರದ ನಿರ್ದೇಶನದಂತೆ ಖಾಸಗಿ ಕೋಟಾದ ಸೀಟುಗಳನ್ನು ಹಂಚಿಕೆ ಮಾಡಿಲ್ಲ. ಹಾಗಾಗಿ, ನರ್ಸಿಂಗ್‌ನಲ್ಲಿ 11,673, ಸೀಟು ಉಳಿದಿವೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.