ADVERTISEMENT

ಸಿಇಟಿ: ಜೂನ್‌ 1ರಿಂದ ದಾಖಲೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 29 ಮೇ 2019, 19:45 IST
Last Updated 29 ಮೇ 2019, 19:45 IST
   

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ದಾಖಲೆಗಳ ಪರಿಶೀಲನೆ ಕಾರ್ಯ ಜೂನ್‌ 1ರಿಂದ ಆರಂಭವಾಗಲಿದೆ.

1ರಂದು ಬೆಳಿಗ್ಗೆ 11ರಿಂದ ಮಲ್ಲೇಶ್ವರ ಕೆಇಎ ಆವರಣದಲ್ಲಿ ವಿಶೇಷ ಕೆಟಗರಿಯಲ್ಲಿ ಬರುವದೈಹಿಕಅಂಗವಿಕಲರ ವೈದ್ಯಕೀಯ ಪರೀಕ್ಷೆ ನಡೆಯಲಿದೆ.

ವಿಶೇಷ ಕೆಟಗರಿಯಲ್ಲಿ ಬರುವ ಎನ್‌ಸಿಸಿ, ಕ್ರೀಡೆ, ಸೇನೆ, ಮಾಜಿ ಸೈನಿಕ, ಸ್ಕೌಟ್ಸ್, ಗೈಡ್ಸ್‌, ಸಿಎಪಿಎಫ್‌, ಮಾಜಿ ಸಿಎಪಿಎಫ್‌, ಎಜಿಎಲ್‌ನ ಅರ್ಹ ಮತ್ತು ಅರ್ಹತೆ ಗಳಿಸದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಜೂನ್‌ 4ರಂದು ಸಂಜೆ 4 ಗಂಟೆ ಬಳಿಕ ಕೆಇಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.

ADVERTISEMENT

ಇತರರ ದಾಖಲೆ ಪರಿಶೀಲನೆ: ಸಾಮಾನ್ಯ, ಮೀಸಲಾತಿ ಅರ್ಹತೆ ಇರುವ ಹಾಗೂ ವಿಶೇಷ ಕೆಟಗರಿಯ ಅಭ್ಯರ್ಥಿಗಳು ಆಯಾ ಜಿಲ್ಲೆಗಳಲ್ಲಿ ಸ್ಥಾಪಿಸಿರುವ ಸಹಾಯವಾಣಿ ಕೇಂದ್ರಗಳಲ್ಲಿ ಅಥವಾ ಅಭ್ಯರ್ಥಿ ದ್ವಿತೀಯ ಪಿಯುಸಿ/ 12ನೇ ತರಗತಿ ವ್ಯಾಸಂಗ ಮಾಡಿದ ಕಡೆಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸಬಹುದು. ಆದರೆ ಹೊರನಾಡು, ಗಡಿನಾಡಿ ಕನ್ನಡಿಗರು, ಜಮ್ಮು ಮತ್ತು ಕಾಶ್ಮೀರ ವಲಸಿಗ ಅಭ್ಯರ್ಥಿಗಳು ಬೆಂಗಳೂರಿಗೇ ಬರಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.