ADVERTISEMENT

ಸಿಇಟಿ: ಎರಡನೇ ಸುತ್ತಿಗೆ 48 ಸಾವಿರ ಸೀಟು ಉಳಿಕೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2024, 15:40 IST
Last Updated 17 ಸೆಪ್ಟೆಂಬರ್ 2024, 15:40 IST
<div class="paragraphs"><p>ಸಿಇಟಿ ಪರೀಕ್ಷೆ</p></div>

ಸಿಇಟಿ ಪರೀಕ್ಷೆ

   

ಬೆಂಗಳೂರು: ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಿಇಟಿ ಮೂಲಕ ಮೊದಲ ಸುತ್ತಿನಲ್ಲಿ ಹಂಚಿಕೆ ಮಾಡಿದ್ದ 1.07 ಲಕ್ಷ ಸೀಟುಗಳಲ್ಲಿ 48 ಸಾವಿರ ಸೀಟುಗಳನ್ನು ಎರಡನೇ ಸುತ್ತಿಗೆ ಕಾಯ್ದಿರಿಸಲಾಗಿದೆ.

ವೈದ್ಯಕೀಯ ಸೀಟು ಹಂಚಿಕೆಯ ನಿರೀಕ್ಷೆಯಲ್ಲಿರುವ ಸಿಇಟಿ ಅಗ್ರ ಶ್ರೇಯಾಂಗದ ವಿದ್ಯಾರ್ಥಿಗಳು ಮೊದಲ ಸುತ್ತಿನಲ್ಲಿ ಪ್ರತಿಷ್ಠಿತ ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡರೂ, ಕಾಲೇಜುಗಳಿಗೆ ಪ್ರವೇಶ ಪಡೆಯದೇ ಸೀಟಗಳನ್ನು ಕಾಯ್ದಿರಿಸಿದ್ದಾರೆ.   

ADVERTISEMENT

ಎಂಜಿನಿಯರಿಂಗ್‌ ವಿಭಾಗದ 64,490 ಸೀಟುಗಳಲ್ಲಿ  32,866 ಸೀಟುಗಳನ್ನು ಎರಡನೇ ಸುತ್ತಿಗೆ ಆಯ್ಕೆ ಮಾಡಿಕೊಂಡಿದ್ದಾರೆ. ಸುಮಾರು 9 ಸಾವಿರ ವಿದ್ಯಾರ್ಥಿಗಳು ಯಾವುದೇ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡಿಲ್ಲ. 19,386 ವಿದ್ಯಾರ್ಥಿಗಳು ಪ್ರವೇಶದ ಆದೇಶವನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದರೂ, 16,038 ವಿದ್ಯಾರ್ಥಿಗಳಷ್ಟೇ ಆಯ್ಕೆ ಮಾಡಿಕೊಂಡ ಕಾಲೇಜುಗಳಿಗೆ ಪ್ರವೇಶ ಪಡೆದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.