ADVERTISEMENT

ಪಿಯು ಪರೀಕ್ಷೆ–3 ತೇರ್ಗಡೆಗೂ ಸಿಇಟಿ ಅವಕಾಶ

2ನೇ ಮುಂದುವರಿದ ಸುತ್ತಿಗೆ ಪ್ರವೇಶ ಕಡ್ಡಾಯ, ರದ್ದತಿಗೆ ಐದು ಪಟ್ಟು ದಂಡ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2024, 15:57 IST
Last Updated 28 ಸೆಪ್ಟೆಂಬರ್ 2024, 15:57 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆ–3ರಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಿಇಟಿ ಎರಡನೇ ಮುಂದುವರಿದ ಸುತ್ತಿನಲ್ಲಿ ಸೀಟು ಹಂಚಿಕೆಗೆ ಅವಕಾಶ ಕಲ್ಪಿಸಲಾಗಿದ್ದು, ಸೆ. 28ರಿಂದಲೇ ಆದ್ಯತಾ ಕ್ರಮದಲ್ಲಿ ಆಯ್ಕೆ ದಾಖಲಿಸಲು ವೆಬ್‌ಸೈಟ್‌ ಲಿಂಕ್‌ ಬಿಡುಗಡೆ ಮಾಡಲಾಗಿದೆ.

ರಾಜ್ಯ ಪಠ್ಯಕ್ರಮದ ಫಲಿತಾಂಶದ ಅಂಕಗಳನ್ನು ನೇರವಾಗಿ ಪಡೆಯಲಾಗಿದೆ. ಸಿಬಿಎಸ್‌ಇ, ಐಸಿಎಸ್‌ಇ ಮೊದಲಾದ ಪಠ್ಯಕ್ರಮದಲ್ಲಿ 12ನೇ ತರಗತಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ತಮ್ಮ ಅಂಕಪಟ್ಟಿ ಮತ್ತು 2024ನೇ ಸಾಲಿನ ಸಿಇಟಿ ಪ್ರವೇಶ ಪತ್ರವನ್ನು ಸೆ. 30ರ ಒಳಗೆ ಪ್ರಾಧಿಕಾರಕ್ಕೆ ಸಲ್ಲಿಸಿ, ಆಯ್ಕೆ ದಾಖಲಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.

ADVERTISEMENT

ಮೊದಲ ಎರಡೂ ಸುತ್ತುಗಳಲ್ಲಿ ಆಯ್ಕೆ ದಾಖಲು ಮಾಡದವರು ಹಾಗೂ ಹಂಚಿಕೆಯಾದ ಸೀಟಿಗೆ ಯಾವುದೇ ‘ಚಾಯ್ಸ್‌’ ನೀಡದವರು ಹಾಗೂ ಇದುವರೆಗೂ ಯಾವುದೇ ಸೀಟು ಹಂಚಿಕೆಯಾಗದವರಿಗೂ ಆಯ್ಕೆ ದಾಖಲಿಸಲು ಸೆ. 30ರಿಂದ ಅ. 4ರವರೆಗೆ ಅವಕಾಶ ನೀಡಲಾಗಿದೆ 

ಮುಂದುವರಿದ ಎರಡನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಅ. 7ರಂದು ಮತ್ತು ಅಂತಿಮ ಫಲಿತಾಂಶವನ್ನು ಅ. 8ರಂದು ಪ್ರಕಟಿಸಲಾಗುವುದು. ಶುಲ್ಕ ಪಾವತಿ, ಪ್ರವೇಶಪತ್ರ ಡೌನ್‌ಲೋಡ್‌ ಮಾಡಿಕೊಳ್ಳಲು ಅ. 9ರಿಂದ 14ರವರೆಗೆ ಅವಕಾಶ ನೀಡಲಾಗುವುದು. ಕಾಲೇಜಿಗೆ ವರದಿ ಮಾಡಿಕೊಳ್ಳಲು ಅ.15 ಕೊನೆ ದಿನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.