ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಇದೇ 18 ಮತ್ತು 19ರಂದು ನಡೆಯಲಿದೆ.
ಸಿಇಟಿ-24 ಬರೆಯಲು 3.27 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸುವಾಗ ತಪ್ಪು ಪರೀಕ್ಷಾ ಕೇಂದ್ರಗಳ ನಮೂದು, ಪರೀಕ್ಷಾ ಶುಲ್ಕ ಪಾವತಿ ವಿಳಂಬದ ಕಾರಣದಿಂದ ಹಲವು ಅಭ್ಯರ್ಥಿಗಳು ಮಂಗಳವಾರವೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಗೆ ಭೇಟಿ ನೀಡಿ, ತಪ್ಪು ಸರಿಪಡಿಸುವ, ಡಿ.ಡಿಗಳನ್ನು ನೀಡಿ ಶುಲ್ಕ ಪಾವತಿ ಸಕ್ರಮಗೊಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿದ್ದರು.
‘ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಂತರ ಅರ್ಜಿಗಳ ತಿದ್ದುಪಡಿಗೆ ಅವಕಾಶ ನೀಡಲಾಗುವುದು. ಅಭ್ಯರ್ಥಿಗಳು ಪರೀಕ್ಷೆಯತ್ತ ಮೊದಲು ಗಮನಹರಿಸಬೇಕು’ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಲಾಗಿದ್ದು, ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಪರೀಕ್ಷಾ ಸಮಯ: ಬೆಳಿಗ್ಗೆ 10.30–11.50 ಮಧ್ಯಾಹ್ನ 2.30–3.50
ವಿಷಯಗಳು: ಜೀವಶಾಸ್ತ್ರ, ಗಣಿತ (ಏ.18), ಭೌತಶಾಸ್ತ್ರ, ರಸಾಯನಶಾಸ್ತ್ರ (ಏ.19).
ಏನು ತೆಗೆದುಕೊಂಡು ಹೋಗಬಹುದು?
* ನೀಲಿ ಅಥವಾ ಕಪ್ಪು ಬಾಲ್ ಪಾಯಿಂಟ್ ಪೆನ್ನು
* ಪ್ರವೇಶಪತ್ರದ ಜತೆಗೆ ಭಾವಚಿತ್ರ ಇರುವ ಒಂದು ಗುರುತುಪತ್ರ (ಆಧಾರ್, ಪಾನ್ ಇತ್ಯಾದಿ)
* ಪರೀಕ್ಷೆ ಆರಂಭಕ್ಕೂ ಮೊದಲು ಕೇಂದ್ರದಲ್ಲಿರಬೇಕು.
ಏನು ತೆಗದುಕೊಂಡು ಹೋಗಬಾರದು?
* ಕೈ ಗಡಿಯಾರ, ಮೊಬೈಲ್ ಫೋನ್
* ಟ್ಯಾಬ್ಲೆಟ್, ಕ್ಯಾಲ್ಕ್ಯುಲೇಟರ್, ಬ್ಲೂಟೂಥ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.