ಹುಬ್ಬಳ್ಳಿ: ‘ಲಿಂಗಾಯತ ಸ್ವತಂತ್ರ ಧರ್ಮವಾಗಲು ಕೇಂದ್ರಕ್ಕೆ ಶಿಫಾರಸು ಸಲ್ಲಿಸುವುದಾಗಿ ಪ್ರಣಾಳಿಕೆಯಲ್ಲಿ ದಾಖಲಿಸುವ ಪಕ್ಷಕ್ಕೆ ಮತ ಹಾಕುತ್ತೇವೆ’ ಎಂದು ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿಯ ಗೌರವಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ, ‘ವೀರಶೈವ ಲಿಂಗಾಯತರು ಮಹಾರಾಷ್ಟ್ರದಲ್ಲಿ ಹೋಗಿ ತಾವು ‘ಹಿಂದೂಗಳು’ ಎಂದು ಹೇಳಿಕೊಳ್ಳುತ್ತಾರೆ. ಆದರೆ ನಾವು ಹಿಂದೂಗಳಲ್ಲ’ ಹಿಂದೂ ಎಂಬುದು ಧರ್ಮ ಅಲ್ಲ, ಜೀವನಶೈಲಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ, ಪ್ರಧಾನಿ ಮೋದಿಯವರೂ ಹೇಳಿದ್ದಾರೆ. 500 ವರ್ಷಗಳ ಇತಿಹಾಸ ಇರುವ ಸಿಖ್ ಸಮಾಜ ಪ್ರತ್ಯೇಕ ಧರ್ಮ ಎನಿಸಿಕೊಂಡಿದೆ. ಜೈನರದ್ದೂ ಪ್ರತ್ಯೇಕ ಧರ್ಮ ಆಗಿರುವಾಗ 900 ವರ್ಷಗಳ ಹಿಂದಿನ ಲಿಂಗಾಯತ ಸಮುದಾಯ ಏಕೆ ಸ್ವತಂತ್ರ ಧರ್ಮ ಆಗಬಾರದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.