ಬೆಂಗಳೂರು: ‘ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅನಾಮಧೇಯರಾಗಿ ಹೋರಾಟ ನಡೆಸಿದವರಿಗೆ ನಮನ ಸಲ್ಲಿಸಿದ್ದೇವೆ. ಜಾಹೀರಾತಿನಲ್ಲಿ ನೆಹರೂ ಅವರ ಚಿತ್ರವೂ ಇದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಸ್ವಾತಂತ್ರ್ಯಕ್ಕೆ ಹೋರಾಡಿದ ಕಾಂಗ್ರೆಸ್ಸಿನ ಹಲವು ಪ್ರಮುಖರ ಚಿತ್ರಗಳು ಇವೆ. ಸ್ವಾತಂತ್ರ್ಯ ಯಾವ ಒಬ್ಬ ವ್ಯಕ್ತಿಯಿಂದ ಬಂದಿಲ್ಲ. ಲಕ್ಷಗಟ್ಟಲೆ ಜನ ಭಾಗವಹಿಸಿದ್ದರು. ಸಾಕಷ್ಟು ಅನಾಮಧೇಯರು ಹೋರಾಟಕ್ಕೆ ಧುಮುಕಿ ತಮ್ಮ ಆಸ್ತಿ ಪಾಸ್ತಿ ಮತ್ತು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇಂತಹ ನೈಜ, ಅನಾಮಧೇಯ ಹೋರಾಟಗಾರರಿಗೆ ಜಾಹೀರಾತು ಸಮರ್ಪಿತವಾಗಿದೆ’ ಎಂದರು.
‘ಸುಮಾರು 65 ವರ್ಷ ಅಂಬೇಡ್ಕರ್, ನೇತಾಜಿ ಸುಭಾಷ್ ಚಂದ್ರ ಬೋಸ್, ವಲ್ಲಭಭಾಯಿ ಪಟೇಲ್ ಮುಂತಾದವರನ್ನು ಇವರು ಮೂಲೆಗುಂಪು ಮಾಡಿದ್ದರು. ದೇಶದ ಉದ್ದಗಲ ರಸ್ತೆಗಳು, ಕಟ್ಟಡಗಳಿಗೆ ನೆಹರೂ ಅವರ ಹೆಸರನ್ನೇ ಇಟ್ಟಿದ್ದರಲ್ಲವೇ. ಈಗ ಇವರಿಗೆ ಅಭದ್ರತೆ ಏಕೆ ಕಾಡುತ್ತಿದೆ’ ಎಂದು ಬೊಮ್ಮಾಯಿ ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.