ADVERTISEMENT

ಕಳಸದಲ್ಲಿ ಹದಗೆಟ್ಟ ರಸ್ತೆ, ಕೆಟ್ಟು ನಿಂತ ಆಂಬುಲೆನ್ಸ್: ನರಳಿದ ಗರ್ಭಿಣಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2023, 21:04 IST
Last Updated 12 ಫೆಬ್ರುವರಿ 2023, 21:04 IST
ಕಳಸ ಸಮೀಪದ ಹಳುವಳ್ಳಿಯಲ್ಲಿ ಕೆಟ್ಟು ನಿಂತ ಅಂಬುಲೆನ್ಸ್‌ನಲ್ಲಿ ಗರ್ಭಿಣಿ ನರಳಿದರು
ಕಳಸ ಸಮೀಪದ ಹಳುವಳ್ಳಿಯಲ್ಲಿ ಕೆಟ್ಟು ನಿಂತ ಅಂಬುಲೆನ್ಸ್‌ನಲ್ಲಿ ಗರ್ಭಿಣಿ ನರಳಿದರು   

ಕಳಸ (ಚಿಕ್ಕಮಗಳೂರು): ಹದಗೆಟ್ಟ ರಸ್ತೆಯಿಂದಾಗಿ ಆಂಬುಲೆನ್ಸ್ ಕೆಟ್ಟು ನಿಂತು, ಗರ್ಭಿಣಿಯೊಬ್ಬರು ಭಾನುವಾರ ಯಾತನೆ ಅನುಭವಿಸಿದರು.

ಗರ್ಭಿಣಿಯನ್ನು ಹೆರಿಗೆಗಾಗಿ ಕೊಪ್ಪದ ಆಸ್ಪತ್ರೆಗೆ ‘108’ ಆಂಬುಲೆನ್ಸ್ ನಲ್ಲಿ ಕರೆದೊಯ್ಯಲಾಗುತ್ತಿತ್ತು. ಹಳುವಳ್ಳಿ ಬಳಿ ಆಕ್ಸೆಲ್ ತುಂಡಾಗಿ ನಿಂತಿತು. ಅದನ್ನು ಕಳಸಕ್ಕೆ ಮತ್ತೊಂದು ವಾಹನದ ಸಹಾಯದಿಂದ ಎಳೆದೊಯ್ದು, ದುರಸ್ತಿ ಮಾಡಿಸಲಾಯಿತು. ಇದಕ್ಕಾಗಿ ಒಂದು ಗಂಟೆ ಹಿಡಿಯಿತು.

ದುರಸ್ತಿಗೊಂಡ ಆಂಬುಲೆನ್ಸ್‌ ಸ್ವಲ್ಪ ದೂರ ಸಾಗುವಷ್ಟರಲ್ಲಿ ಮತ್ತೆ ಕೆಟ್ಟು ನಿಂತಿತು. ಬಾಳೆಹೊನ್ನೂರಿನಿಂದ ಮತ್ತೊಂದು ಆಂಬುಲೆನ್ಸ್‌ ಬರಲು ಒಂದು ಗಂಟೆ ಹಿಡಿಯಿತು. ಈ ಅವಧಿಯಲ್ಲಿ, ಕೆಟ್ಟು ನಿಂತಿದ್ದ ಆಂಬುಲೆನ್ಸ್‌ನಲ್ಲೇ ಗರ್ಭಿಣಿ ನರಳುವಂತಾಯಿತು. ನಂತರ ಅವರನ್ನು ಕೊಪ್ಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ADVERTISEMENT

‘ರೋಗಿಗಳು ಮತ್ತು ಬಡವರಿಗೆ ನೆರವಾಗುವುದನ್ನು ಬಿಟ್ಟು ರಾಜಕಾರಣಿಗಳು ‘ಕಳಸ ಉತ್ಸವ’ ಆಯೋಜನೆಯಲ್ಲಿ ನಿರತರಾಗಿದ್ದಾರೆ’ ಎಂದು ಪಂಚಾಯಿತಿ ಮಾಜಿ ಸದಸ್ಯ ರಾಮಮೂರ್ತಿ ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.