ಬೆಂಗಳೂರು: ‘ಪಾಲಕರಿಗೆ ಮಗುವಿನ ಭೇಟಿಯ ಹಕ್ಕು ಕಲ್ಪಿಸುವ ಅಧಿಕಾರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಇಲ್ಲ’ ಎಂದು ಹೈಕೋರ್ಟ್ ಆದೇಶಿಸಿದೆ.
ಆಯೋಗದ ಕ್ರಮವನ್ನು ಪ್ರಶ್ನಿಸಿ ಮಗುವಿನ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದ್ದು, ಅರ್ಜಿದಾರ ಮಹಿಳೆಯ ಪತಿಗೆ ಮಗುವಿನ ಭೇಟಿ ಹಕ್ಕು ನೀಡಿ 2017ರ ಜು. 7ರಂದು ಆಯೋಗ ಹೊರಡಿಸಿದ್ದ ಆದೇಶ ರದ್ದುಪಡಿಸಿದೆ.
‘ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಒಂದು ಸಲಹಾ ಸಂಸ್ಥೆಯಾಗಿದೆ. ಅದು ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ನೀತಿ ನಿರ್ಧಾರಗಳನ್ನು ರೂಪಿಸಲು ಸರ್ಕಾರಕ್ಕೆ ಸಲಹೆ, ಸೂಚನೆಯನ್ನಷ್ಟೇ ನೀಡಬಹುದು. ಹೊರತು, ಯಾವುದೇ ತೀರ್ಪುಗಳನ್ನು ನೀಡುವ ಅಥವಾ ಪಕ್ಷಗಾರರ ನಡುವಿನ ವ್ಯಾಜ್ಯ ನಿರ್ಣಯಿಸುವ ಅಧಿಕಾರವನ್ನು ಹೊಂದಿರುವುದಿಲ್ಲ‘ ಎಂದಿದೆ. ‘ಮಗುವಿನ ಸುಪರ್ದಿಗೆ ಸಂಬಂಧಿ
ಸಿದ ವ್ಯಾಜ್ಯ ಸಕ್ಷಮ ವಿಚಾರಣೆಗೆ ಬಾಕಿ ಇರುವಾಗ ಆಯೋಗವು ಮಗುವಿನ ಭೇಟಿಯ ಹಕ್ಕನ್ನು ಮಂಜೂರು ಮಾಡಿ ಆದೇಶಿಸಲು ಸಾಧ್ಯವಿಲ್ಲ. ಇದು ಕಾನೂನುಬಾಹಿರ‘ ಎಂದು ವಿವರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.