ADVERTISEMENT

ಅನುವಂಶಿಕ ಕಾಯಿಲೆ: ಆಸ್ಪತ್ರೆಗೆ ಮಗುವಿನ ನೇತ್ರದಾನ

​ಪ್ರಜಾವಾಣಿ ವಾರ್ತೆ
Published 8 ಜನವರಿ 2023, 19:31 IST
Last Updated 8 ಜನವರಿ 2023, 19:31 IST
ಬಸವಪ್ರಭು
ಬಸವಪ್ರಭು   

ಹಟ್ಟಿಚಿನ್ನದಗಣಿ (ರಾಯಚೂರು): ಅನುವಂಶಿಕ ಕಾಯಿಲೆಯಿಂದ ಮೃತಪಟ್ಟ ಒಂದೂವರೆ ವರ್ಷದ ಮಗುವಿನ ಕಣ್ಣುಗಳನ್ನು ಪಾಲಕರು ದಾನ ಮಾಡಿದ್ದಾರೆ.

ರಾಯಚೂರು ಜಿಲ್ಲೆಯ ಚಿನ್ನದ ಗಣಿ ನೌಕರರಾಗಿರುವ ಅಮರೇಶಗೌಡ ಗೆಜ್ಜಲಗಟ್ಟಾ ಹಾಗೂ ವಾಣಿ ದಂಪತಿಗೆ ಮಗು ಜನಿಸಿತ್ತು. ಕಾಯಿಲೆಯಿಂದ ಬಳಲುತ್ತಿದ್ದ ಮಗು ಕೇವಲ ಎರಡು ವರ್ಷ ಬದುಕಿರುತ್ತದೆ ಎಂದು ಬೆಳಗಾವಿಯ ವೈದ್ಯರು ತಿಳಿಸಿದ್ದರು.

ಮಗು ಬಸವಪ್ರಭು ಭಾನುವಾರ ಮೃತಪಟ್ಟಿದ್ದು, ಕಣ್ಣುಗಳನ್ನು ರಾಯಚೂರಿನ ನವೋದಯ ಆಸ್ಪತ್ರೆಗೆ ದಾನ ಮಾಡಿದರು.

ADVERTISEMENT

‘ಬೆಳಗಾವಿ ಹಾಗೂ ರಾಯಚೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದೆವು. ಆದರೂ ಮಗು ಬದುಕಿ ಉಳಿಯಲಿಲ್ಲ. ನೇತ್ರದಾನ ಮಾಡಿದರೆ ಕೆಲವರ ಬಾಳಿಗೆ ಬೆಳಕಾಗಬಹುದು’ ಎಂದು ವೈದ್ಯರು ತಿಳಿಸಿದ್ದರು. ಅದಕ್ಕಾಗಿ ದಾನ ಮಾಡಿದ್ದೇವೆ’ ಎಂದು ವಾಣಿ ಅಮರೇಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.