ADVERTISEMENT

ಮಕ್ಕಳಿಗೆ ಇಂದಿನಿಂದ ವಾರಕ್ಕೆ ಆರು ದಿನ ಮೊಟ್ಟೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2024, 0:07 IST
Last Updated 25 ಸೆಪ್ಟೆಂಬರ್ 2024, 0:07 IST
<div class="paragraphs"><p>ಮೊಟ್ಟೆ</p></div>

ಮೊಟ್ಟೆ

   

ಬೆಂಗಳೂರು: ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 56 ಲಕ್ಷ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜತೆಗೆ ಸೆ.25ರಿಂದ ವಾರದ ಆರು ದಿನ ಮೊಟ್ಟೆ ಪೂರೈಸಲಾಗುತ್ತದೆ.

ಯಾದಗಿರಿ ಜಿಲ್ಲೆ ಅರಕೇರಾ ಕೆ. ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಬೇಯಿಸಿದ ಮೊಟ್ಟೆ ನೀಡುವ ಮೂಲಕ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಲಿದ್ದಾರೆ.

ADVERTISEMENT

ಸರ್ಕಾರ ಎರಡು ದಿನ ಮೊಟ್ಟೆ ಪೂರೈಸಿದರೆ, ಉಳಿದ ನಾಲ್ಕು ದಿನ ಅಜೀಂ ಪ್ರೇಮ್‌ಜಿ ಫೌಂಡೇಷನ್ ನೀಡಲಿದೆ. ಮೂರು ವರ್ಷ ಪೂರೈಸಲು ₹1,500 ಕೋಟಿ ನೆರವು ನೀಡಲು ಶಾಲಾ ಶಿಕ್ಷಣ ಇಲಾಖೆ ಹಾಗೂ ಅಜೀಂ ಪ್ರೇಮ್‌ಜಿ ಫೌಂಡೇಷನ್ ನಡುವೆ ಜುಲೈನಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.