ದಾವಣಗೆರೆ: ಜಿಲ್ಲೆಯ ಚನ್ನಗಿರಿ ಸಂತೇಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಎಕನಾಮಿಕ್ಸ್ ಬೋಧಿಸುವ ಚೌಡೇಶ್ ಎಸ್. ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯಲಾಗದೆ ಕಂಗಾಲಾಗಿದ್ದಾರೆ.
ನೆಟ್, ಕೆ–ಸೆಟ್ ಪರೀಕ್ಷೆ ಉತ್ತೀರ್ಣರಾಗಿರುವ ಅವರು ಕಾಯಂ ಉದ್ಯೋಗಕ್ಕಾಗಿ ಕಾಯುತ್ತಿದ್ದರು. ನಾಲ್ಕು ತಿಂಗಳುಗಳಿಂದ ಅವರ ಕಾಲು ಗ್ಯಾಂಗ್ರಿನ್ ಆಗಿದೆ. ಈಗ ಡೆಂಗಿ ಜ್ವರ ಕೂಡ ಬಂದಿದೆ. ಅವರ ಸ್ಥಿತಿ ನೋಡಿ ಅತಿಥಿ ಉಪನ್ಯಾಸಕರು ತಮ್ಮ ಕೈಯಲ್ಲಾದ ಸಹಾಯ ಮಾಡಿದ್ದಲ್ಲದೇ ಬೇರೆಯವರು ಸಹಾಯ ಮಾಡುವಂತೆ ವಾಟ್ಸ್‌ಆ್ಯಪ್, ಫೇಸ್‌ಬುಕ್‌ಗಳಲ್ಲಿ ಮನವಿ ಮಾಡಿದ್ದಾರೆ. ಅತಿಥಿ ಉಪನ್ಯಾಸಕರು ₹ 15 ಸಾವಿರ ನೀಡಿದ್ದರೆ, ಸಂತೇಬೆನ್ನೂರು ಕಾಲೇಜಿನ ಉಪನ್ಯಾಸಕರು ₹ 20 ಸಾವಿರ ನೀಡಿದ್ದಾರೆ. ಶನಿವಾರ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ನೆರವು ನೀಡುವವರು ಅವರ ಉಳಿತಾಯ ಖಾತೆಗೆ (ಖಾತೆ ಸಂಖ್ಯೆ: 64131189398, ಐಎಫ್‌ಎಸ್‌ಸಿ ಕೋಡ್: SBIN0040340) ಹಣ ಪಾವತಿಸಬಹುದು ಎಂದು ಅತಿಥಿ ಉಪನ್ಯಾಸಕ ಶಿವಕುಮಾರ್ ಯರಗಟ್ಟಿಹಳ್ಳಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.