ADVERTISEMENT

ಭಾಷಾ ನಿಯಮ ಪಾಲನೆಗೆ ‘ಸಿಐಎಸ್‌ಸಿಇ’ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 19:34 IST
Last Updated 9 ಜುಲೈ 2024, 19:34 IST
   

ಬೆಂಗಳೂರು: ಸಿಬಿಎಸ್‌ಸಿ, ಐಸಿಎಸ್‌ಇ ಪಠ್ಯಕ್ರಮ ಅನುಸರಿಸುವ ಎಲ್ಲ ಶಾಲೆಗಳೂ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಬೇಕು ಎನ್ನುವ ರಾಜ್ಯ ಸರ್ಕಾರದ ಆದೇಶವನ್ನು ಪಾಲಿಸುವಂತೆ ‘ಕೌನ್ಸಿಲ್‌ ಫಾರ್‌ ದಿ ಇಂಡಿಯನ್‌ ಸ್ಕೂಲ್ ಸರ್ಟಿಫಿಕೇಟ್‌ ಎಕ್ಸಾಮಿನೇಷನ್ಸ್‌’ (ಸಿಐಎಸ್‌ಸಿಇ) ಸೂಚಿಸಿದೆ.

ನಗರದಲ್ಲಿ ಮಂಗಳವಾರ ನಡೆದ ಶಾಲಾ ಮುಖ್ಯಸ್ಥರ ಸಭೆಯಲ್ಲಿ ಸೂಚನೆ ನೀಡಿದ ಸಿಐಎಸ್‌ಸಿಇ ಮುಖ್ಯ ಕಾರ್ಯನಿರ್ವಾಹಕ ಜೋಸೆಫ್ ಇಮ್ಯಾನುಯೆಲ್, ‘ಕರ್ನಾಟಕ ಶಿಕ್ಷಣ ಸಂಸ್ಥೆಗಳ (ನಿರಾಕ್ಷೇಪಣಾ ಪ್ರಮಾಣಪತ್ರ ಮತ್ತು ನಿಯಂತ್ರಣದ ವಿತರಣೆ) ನಿಯಮಗಳನ್ನು ಪಾಲಿಸಬೇಕು. ಶಾಲೆಗಳು ಆಯಾ ರಾಜ್ಯಗಳ ಭಾಷಾ ನೀತಿಗೆ ಬದ್ಧವಾಗಿರಬೇಕು’ ಎಂದರು.

‘ಪಠ್ಯ ಪುಸ್ತಕಗಳ ಬೆಲೆ ಅಧಿಕವಾಗಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಎಂಟನೇ ತರಗತಿಯವರೆಗೆ ಶಾಲೆಗಳೇ ಪಠ್ಯಪುಸ್ತಕ ಆಯ್ಕೆ ಮಾಡುವ ಸ್ವಾತಂತ್ರ್ಯ ಬಳಸಿಕೊಳ್ಳಬೇಕು. ಆಗ ಪುಸ್ತಕಗಳ ಬೆಲೆಯ ಹೊರೆಯನ್ನು ಪೋಷಕರಿಗೆ ಕಡಿಮೆ ಮಾಡಬಹುದು’ ಎಂದು ಸಲಹೆ ನೀಡಿದರು.

ADVERTISEMENT

‘ಮುಂಬರುವ ದಿನಗಳಲ್ಲಿ ಶಾಲೆಗಳ ಕಾರ್ಯಕ್ಷಮತೆಯನ್ನು ವಿಶ್ವ ಶ್ರೇಯಾಂಕಗಳ ಆಧಾರದಲ್ಲಿ ಮೌಲ್ಯಮಾಪನ ಮಾಡಲಾಗುವುದು. ಶೇ 40ರಷ್ಟು ಮೌಲ್ಯಮಾಪನವು ಬೋಧನೆ ಮತ್ತು ಕಲಿಕೆಯ ಮೇಲೆ ಆಧಾರಿತವಾಗಿರುತ್ತದೆ. ಶಾಲೆಗಳ ನಡುವೆ ಆರೋಗ್ಯಕರ ಸ್ಪರ್ಧೆಗೆ ಮಾನದಂಡವಾಗಿ ಕಾರ್ಯನಿರ್ವಹಿಸಲು ಅವಕಾಶವಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.