ADVERTISEMENT

ಸಿವಿಲ್ ಜಡ್ಜ್ ಪರೀಕ್ಷೆ: ಗರ್ಭಿಣಿ ಅಭ್ಯರ್ಥಿಗೆ ವಿಶೇಷ ಅವಕಾಶ ಕಲ್ಪಿಸಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2023, 15:32 IST
Last Updated 17 ನವೆಂಬರ್ 2023, 15:32 IST
<div class="paragraphs"><p>ಹೈಕೋರ್ಟ್ </p></div>

ಹೈಕೋರ್ಟ್

   

ಬೆಂಗಳೂರು: ನ್ಯಾಯಾಧೀಶರ ಹುದ್ದೆಗೆ ನಡೆಯಲಿರುವ ಲಿಖಿತ ಪರೀಕ್ಷೆ ಬರೆಯಲು ಎಂಟೂವರೆ ತಿಂಗಳ ಗರ್ಭಿಣಿ ವಕೀಲೆಯೊಬ್ಬರಿಗೆ ಹೈಕೋರ್ಟ್‌ ಅವರಿರುವ ಊರಿನಲ್ಲೇ ಅವಕಾಶ ಕಲ್ಪಿಸಿದೆ. ಇದೇ ಮೊದಲ ಬಾರಿಗೆ ಹೈಕೋರ್ಟ್‌ ಇಂತಹುದೊಂದು ವಿಶೇಷ ಅವಕಾಶವನ್ನು ಕಲ್ಪಿಸಲಾಗಿದೆ.

ಈ ಕುರಿತಂತೆ ಅಭ್ಯರ್ಥಿ ಸಲ್ಲಿಸಿದ್ದ ಮನವಿಯನ್ನು ಸಿವಿಲ್‌ ನ್ಯಾಯಾಧೀಶರ ನೇರ ನೇಮಕಾತಿ ಸಮಿತಿಯ ನ್ಯಾಯಮೂರ್ತಿಗಳಾದ ಪಿ.ಎಸ್.ದಿನೇಶ್‌ ಕುಮಾರ್, ಕೆ.ಸೋಮಶೇಖರ್‌, ಎಸ್‌.ಸುನಿಲ್ ದತ್‌ ಯಾದವ್‌,  ಅಶೋಕ್‌ ಎಸ್‌.ಕಿಣಗಿ ಮತ್ತು ಎಂ.ನಾಗಪ್ರಸನ್ನ ಅವರು ಮಾನ್ಯ ಮಾಡಿದ್ದು, ಈ ನಿರ್ಧಾರಕ್ಕೆ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಸಮ್ಮತಿ ಸೂಚಿಸಿದ್ದಾರೆ. 

ADVERTISEMENT

‘ಸಿವಿಲ್‌ ನ್ಯಾಯಾಧೀಶರ 57 ಹುದ್ದೆಗಳ ಭರ್ತಿಗೆ ಇದೇ 18 ಮತ್ತು 19ರಂದು ಲಿಖಿತ ಮುಖ್ಯ ಪರೀಕ್ಷೆ  ಬೆಂಗಳೂರಿನಲ್ಲಿ ಮಾತ್ರವೇ ನಡೆಯಲಿದ್ದು, ಬೇರೆಲ್ಲೂ ಬರೆಯಲು ಅವಕಾಶವಿಲ್ಲ. ಮಂಗಳೂರಿನ ವಕೀಲೆ ನೇತ್ರಾವತಿ ಅವರೂ ಈ ಪರೀಕ್ಷೆಗೆ ಹಾಜರಾಗಬೇಕಿದ್ದು, ಅವರೀಗ ತುಂಬು ಗರ್ಭಿಣಿಯಾಗಿರುವ ಕಾರಣ ಮಂಗಳೂರಿನ ಜಿಲ್ಲಾ ನ್ಯಾಯಾಲಯದಲ್ಲೇ ಪರೀಕ್ಷೆಗೆ ಹಾಜರಾಗಲು ಅವರಿಗೆ ಅವಕಾಶ ಒದಗಿಸಲಾಗಿದೆ. ಪರೀಕ್ಷೆ ಬರೆಯುವ ಸ್ಥಳದಲ್ಲಿ ಅಭ್ಯರ್ಥಿಗೆ ಅನುಕೂಲವಾಗುವಂತೆ ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯಕ್ಕೆ ವ್ಯವಸ್ಥೆ ಸಜ್ಜುಗೊಳಿಸಲಾಗಿದೆ‘ ಎಂದು ರಿಜಿಸ್ಟ್ರಾರ್‌ ಜನರಲ್‌ ಕೆ.ಎಸ್.ಭರತ್‌ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.