ನವದೆಹಲಿ: ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಪಡೆದಿರುವ ಶ್ರುತಿ ಶರ್ಮಾ ಅವರು ಶೇ 54.56ರಷ್ಟು ಹಾಗೂ ದ್ವಿತೀಯ ರ್‍ಯಾಂಕ್ ಪಡೆದಿರುವ ಅಂಕಿತಾ ಅಗರವಾಲ್ ಅವರು ಶೇ 51.85ರಷ್ಟು ಅಂಕ ಗಳಿಸಿದ್ದಾರೆ ಎಂದು ಯುಪಿಎಸ್‌ಸಿ ಹೇಳಿದೆ.
ಶ್ರುತಿ ಅವರು ಒಟ್ಟು 1,105 ಅಂಕ (ಲಿಖಿತ ಪರೀಕ್ಷೆಯಲ್ಲಿ 932 ಹಾಗೂ ಸಂದರ್ಶನದಲ್ಲಿ 173 ಅಂಕ) ಹಾಗೂ ಅಂಕಿತಾ ಅವರು ಒಟ್ಟು 1,050 ಅಂಕ (ಲಿಖಿತ ಪರೀಕ್ಷೆಯಲ್ಲಿ 871 ಮತ್ತು ಸಂದರ್ಶನದಲ್ಲಿ 179 ಅಂಕ) ಗಳಿಸಿದ್ದಾರೆ ಎಂದಿದೆ.
ಮೂರನೇ ರ್‍ಯಾಂಕ್ ಪಡೆದಿರುವ ಗಾಮಿನಿ ಸಿಂಗ್ಲಾ ಒಟ್ಟು1,045 ಅಂಕ (ಮುಖ್ಯ ಪರೀಕ್ಷೆಯಲ್ಲಿ 858 ಹಾಗೂ ಸಂದರ್ಶನದಲ್ಲಿ 187 ಅಂಕ) ಗಳಿಸಿದ್ದಾರೆ ಎಂದೂ ಯುಪಿಎಸ್‌ಸಿ ಹೇಳಿದೆ.
177 ಮಹಿಳೆಯರು ಸೇರಿ ಒಟ್ಟು 685 ಅಭ್ಯರ್ಥಿಗಳು ಈ ಬಾರಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.