ADVERTISEMENT

ಕೋಮು ಸೌಹಾರ್ದತೆಯ ಮಹತ್ವವನ್ನು ಸಾರಿದ ಸುತಾರ: ಸಿಎಂ ಬೊಮ್ಮಾಯಿ ಸಂತಾಪ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2022, 6:26 IST
Last Updated 5 ಫೆಬ್ರುವರಿ 2022, 6:26 IST
   

ಬೆಂಗಳೂರು: ಸರ್ವಧರ್ಮ ಪ್ರವಚನಾಕಾರ, ಪ್ರದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಭಾವೈಕ್ಯತೆಯ ಮೌಲ್ಯಗಳನ್ನ ಜನಸಾಮಾನ್ಯರಲ್ಲಿ ಬಿತ್ತಿದ ಸುತಾರ ಅವರು ಅಧ್ಯಾತ್ಮ ಸಾಧನೆಗೆ ಧರ್ಮ ಭೇದಗಳಿಲ್ಲ. ಅದು ಎಲ್ಲರಿಗೂ ತೆರೆದ ದಾರಿ ಎನ್ನುವುದನ್ನು ಸಾರಿದ ಆಧುನಿಕ ಕಬೀರರು. ಕೋಮು ಸೌಹಾರ್ದತೆಯ ಮಹತ್ವವನ್ನು ಸಾರಿದ ಸುತಾರ ಅವರು ಮಾನವೀಯತೆಗಿಂತ ಮಿಗಿಲಾದ ಧರ್ಮವಿಲ್ಲ ಎಂದು ನಡೆದು ತೋರಿಸಿದ್ದಲ್ಲದೆ, ಎಲ್ಲಾ ಧರ್ಮಗಳ ಸಾರವೂ ಒಂದೇ ಎಂದು ಪ್ರತಿಪಾದಿಸಿದರು.

ಅವರ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕುವುದು ನಾವು ಅವರಿಗೆ ತೋರುವ ನೈಜ ಗೌರವ .ಅವರ ನಿಧನದಿಂದ ನಾಡು ಬಡವಾಗಿದೆ . ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ಹಾಗೂ ಅಪಾರ ಅಭಿಮಾನಿಗಳಿಗೆ ನೀಡಲಿ ಎಂದು ಮುಖ್ಯ ಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.