ADVERTISEMENT

ಸಾಮರಸ್ಯಕ್ಕೆ ಪ್ರಾರ್ಥಿಸಿ: ಹಜ್‌ ಯಾತ್ರಿಗಳಿಗೆ ಸಿ.ಎಂ ಮನವಿ

​ಪ್ರಜಾವಾಣಿ ವಾರ್ತೆ
Published 21 ಮೇ 2024, 15:42 IST
Last Updated 21 ಮೇ 2024, 15:42 IST
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಗಡೆ ನಗರದ ಹಜ್ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಹಜ್ ಯಾತ್ರಿಗಳಿಗೆ ಬೀಳ್ಕೊಟ್ಟರು. ವಸತಿ ಸಚಿವ ಜಮೀರ್ ಅಹಮದ್ ಖಾನ್, ಹಜ್ ಸಚಿವ ರಹೀಂ ಖಾನ್ ಇದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಗಡೆ ನಗರದ ಹಜ್ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಹಜ್ ಯಾತ್ರಿಗಳಿಗೆ ಬೀಳ್ಕೊಟ್ಟರು. ವಸತಿ ಸಚಿವ ಜಮೀರ್ ಅಹಮದ್ ಖಾನ್, ಹಜ್ ಸಚಿವ ರಹೀಂ ಖಾನ್ ಇದ್ದರು.   

ಬೆಂಗಳೂರು: ‘ಎಲ್ಲ ಧರ್ಮವರಿಗೂ ಆರ್ಥಿಕ, ಸಾಮಾಜಿಕ, ರಾಜಕೀಯ ಶಕ್ತಿ ಬಂದು ಸಬಲರಾಗಬೇಕು. ದೇಶ ಮತ್ತು ರಾಜ್ಯದಲ್ಲಿ ಉತ್ತಮ ಮಳೆಯಾಗಿ ಬೆಳೆ ಬರಲಿ, ನಾಡು ಸಮೃದ್ಧವಾಗಲಿ ಎಂದು ಹಜ್‌ ಯಾತ್ರಿಗಳು ಪ್ರಾರ್ಥಿಸಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಹೆಗಡೆನಗರದಲ್ಲಿರುವ ಹಜ್‌ ಭವನದಲ್ಲಿ ಆಯೋಜಿಸಲಾಗಿದ್ದ ಹಜ್‌ ಯಾತ್ರಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.

‘10,168 ಹಜ್‌ ಯಾತ್ರಿಗಳ  ಪ್ರಯಾಣ ಸುಖಕರವಾಗಿರಲಿ ಎಂದು ಶುಭಕೋರಿದ್ದೇನೆ. ಸಮಾಜದಲ್ಲಿ ಸಾಮರಸ್ಯ, ಸೌಹಾರ್ದ ನೆಲಸಲಿ ಎಂದು ಪ್ರಾರ್ಥಿಸುವಂತೆ ತಿಳಿಸಿದ್ದೇನೆ. ಕುವೆಂಪು ಅವರು ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೇಳಿದಂತೆ ಹಿಂದೂ, ಮುಸ್ಲಿ, ಕ್ರಿಶ್ಚಿಯನ್‌, ಬೌದ್ಧ, ಸಿಖ್‌ ಧರ್ಮದವರೆಲ್ಲ ಒಂದು ತಾಯಿಯ ಮಕ್ಕಳಂತೆ ಇರಬೇಕು. ಇದಕ್ಕಾಗಿ ಪ್ರಾರ್ಥಿಸುವಂತೆ ಯಾತ್ರಾರ್ಥಿಗಳಲ್ಲಿ ಮನವಿ ಮಾಡಿದ್ದೇನೆ’ ಎಂದೂ ಅವರು ಹೇಳಿದರು.

ADVERTISEMENT

ಅನುದಾನ: ಮಂಗಳೂರು ಮತ್ತು ಕಲಬುರಗಿಯಲ್ಲಿ ಹಜ್‌ ಭವನ ನಿರ್ಮಾಣಕ್ಕಾಗಿ ಅನುದಾನ ಒದಗಿಸಲಾಗಿದೆ. ಕಲಬುರಗಿಯಲ್ಲಿ ಸ್ಥಳ ಸಿಗದೇ ವಿಳಂಬವಾಗಿದೆ. ಮಂಗಳೂರಿನಲ್ಲಿ ಸ್ಥಳ ಗುರುತಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಮುಗಿದ ಮೇಲೆ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.