ಬೆಂಗಳೂರು: ನಟ, ನಿರ್ದೇಶಕ ಅರ್ಜುನ್ ಸರ್ಜಾ ವಿರುದ್ಧಲೈಂಗಿಕ ದೌರ್ಜನ್ಯ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್ ನಗರದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ನೀಡಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿದ್ದ ನಟಿ ಶ್ರುತಿ ಹರಿಹರನ್ ಹಾಗೂ ನಟ ಅರ್ಜುನ್ ಸರ್ಜಾ ಮಧ್ಯದ ಮೀಟೂ ಕಾದಾಟ ಈಗ ಕಾನೂನು ಹೋರಾಟದ ಸ್ವರೂಪ ಪಡೆದುಕೊಂಡಿದೆ. ಈಗಾಗಲೇಸರ್ಜಾ ಆಪ್ತ ನೀಡಿರುವ ದೂರು ಪರಿಗಣಿಸಿ ಶ್ರುತಿ ವಿರುದ್ಧ ಪೊಲೀಸ್ ಎಫ್ಐಆರ್ ದಾಖಲಿಸಿದ್ದರು. ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯ ಬಳಿಕ ಶ್ರುತಿ, ಸರ್ಜಾ ಆಪ್ತ ಪ್ರಶಾಂತ್ ವಿರುದ್ಧ ದೂರು ದಾಖಲಿಸಿದ್ದರು.‘ಜೀವ ಬೆದರಿಕೆ ಹಾಗೂ ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಆರೋಪದಡಿ ಪ್ರಶಾಂತ್ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ:#MeToo :ಶ್ರುತಿ ಮಾತು ಕೇಳಿಸಿಕೊಳ್ಳಲೂ ಕಷ್ಟವೇಕೆ?
ಇದೀಗ ಶ್ರುತಿ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ನೀಡಿದ್ದಾರೆ. 2015ರಲ್ಲಿ ನಡೆದಿರುವ ಘಟನೆಗಳನ್ನು ದೂರಿನಲ್ಲಿ 29 ವರ್ಷ ವಯಸ್ಸಿನ ಶ್ರುತಿ ವಿವರಿಸಿದ್ದಾರೆ. ಈ ದೂರಿನಲ್ಲಿ ಶ್ರುತಿ ಹೆಸರಿನೊಂದಿಗೆ ರಾಮ್ ಕುಮಾರ್ ಅವರ ಪತ್ನಿ ಎಂದು ಆವರಣದಲ್ಲಿ ಬರೆಯಲಾಗಿದ್ದು, ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ:ಕೋರ್ಟ್, ಠಾಣೆ ಮೆಟ್ಟಿಲೇರಿದ ಶ್ರುತಿ #MeToo
(ಶ್ರುತಿ ಹರಿಹರನ್ ನೀಡಿರುವ ದೂರಿನ ಪ್ರತಿ)
ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.