ADVERTISEMENT

ವಚನಕ್ರಾಂತಿ ಹತ್ತಿಕ್ಕಿದವರು ಇಂದೂ ಇದ್ದಾರೆ: ಎಸ್‌.ಜಿ.ಸಿದ್ದರಾಮಯ್ಯ

‘ಮಡಿವಾಳ ಮಾಚಿದೇವರ ಸಮಗ್ರ ವಚನಗಳು’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 19:27 IST
Last Updated 9 ಸೆಪ್ಟೆಂಬರ್ 2022, 19:27 IST
ನಗರದಲ್ಲಿ ಶುಕ್ರವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ‘ಮಡಿವಾಳ ಮಾಚಿದೇವರ ಸಮಗ್ರ ವಚನಗಳು’ ಗ್ರಂಥ ಬಿಡುಗಡೆ ಮಾಡಿದರು. ಅಶೋಕ ದೊಮ್ಮಲೂರು, ಪ್ರೊ.ಎಸ್.ಜಿ ಸಿದ್ದರಾಮಯ್ಯ, ಗೊ.ರು. ಚನ್ನಬಸಪ್ಪ, ಶಿವರುದ್ರ ಸ್ವಾಮೀಜಿ, ಎಚ್ ರವಿಕುಮಾರ್ ಇದ್ದರು -ಪ್ರಜಾವಾಣಿ ಚಿತ್ರ.
ನಗರದಲ್ಲಿ ಶುಕ್ರವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ‘ಮಡಿವಾಳ ಮಾಚಿದೇವರ ಸಮಗ್ರ ವಚನಗಳು’ ಗ್ರಂಥ ಬಿಡುಗಡೆ ಮಾಡಿದರು. ಅಶೋಕ ದೊಮ್ಮಲೂರು, ಪ್ರೊ.ಎಸ್.ಜಿ ಸಿದ್ದರಾಮಯ್ಯ, ಗೊ.ರು. ಚನ್ನಬಸಪ್ಪ, ಶಿವರುದ್ರ ಸ್ವಾಮೀಜಿ, ಎಚ್ ರವಿಕುಮಾರ್ ಇದ್ದರು -ಪ್ರಜಾವಾಣಿ ಚಿತ್ರ.   

ಬೆಂಗಳೂರು: ಬಹುತ್ವದ ನೆಲೆಗಟ್ಟಿನ ವಚನ ಕ್ರಾಂತಿಯನ್ನು ಹತ್ತಿಕ್ಕಿದ ಪಟ್ಟಭದ್ರರೇ ಇಂದಿಗೂ ಜನಪರ ಧ್ವನಿಗಳನ್ನು ನಿರಂತರವಾಗಿ ದಮನಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಾಹಿತಿ ಎಸ್‌.ಜಿ.ಸಿದ್ದರಾಮಯ್ಯ ದೂರಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಬೆಂಗಳೂರು ನಗರ ಘಟಕ ಶುಕ್ರವಾರ ಹಮ್ಮಿಕೊಂಡಿದ್ದ ಅಶೋಕ ದೊಮ್ಮಲೂರು ಸಂಪಾದಕತ್ವದ ‘ಮಡಿವಾಳ ಮಾಚಿದೇವರ ಸಮಗ್ರ ವಚನಗಳು’ ಗ್ರಂಥ ಬಿಡು ಗಡೆ ಸಮಾರಂಭದಲ್ಲಿ ಮಾತನಾಡಿದರು.

ಜಾತಿ, ಭೇದವಿಲ್ಲದ ಸಮಾನತೆಯ ತತ್ವದ ಮೇಲೆ 12ನೇ ಶತಮಾನದಲ್ಲಿಹುಟ್ಟಿಬಂದ ವಚನ ಚಳವಳಿಯ ವಿರುದ್ಧ ಕೆಲವರು ಯುದ್ಧವನ್ನೇ ಸಾರಿದರು. ವಚನಗಳನ್ನು ನಿರ್ನಾಮ ಮಾಡಿದರು. ಅಳಿದುಳಿದ ವಚನಗಳೇ ಇಂದು ಭವಿಷ್ಯದ ದಾರಿ ತೋರುತ್ತಿವೆ. ಅವುಗಳ ಸಂರಕ್ಷಣೆ, ಅನುಸರಣೆ ಇಂದಿನ ಅಗತ್ಯ ಎಂದು
ಪ್ರತಿಪಾದಿಸಿದರು.

ADVERTISEMENT

ವಿಶ್ವದ ಇತಿಹಾಸದಲ್ಲೇ ದುಡಿಯುವ, ಶ್ರಮಿಕ ವರ್ಗ ರಚಿಸಿದ ಏಕೈಕ ಸಾಹಿತ್ಯವೆಂದರೆ ವಚನಗಳು. ವೇಶ್ಯಾವಾಟಿಕೆಯಿಂದ ಹೊರಬಂದ ಪುಣ್ಯಸ್ತ್ರೀಯರೂ ವಚನ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ಇಂತಹ ಮೌಲ್ಯಗಳ ತಳಹದಿಯ ಮೇಲೆ ಹುಟ್ಟಿದ್ದೇ ಲಿಂಗಾಯತ ಧರ್ಮ. ನೆಲ, ಜೀವ, ಸಮಾಧಿ, ಸಂಸ್ಕೃತಿಯ ಬೇರುಗಳನ್ನು ಅದು ಒಳಗೊಂಡಿದೆ. ಅದು ಸಂವೇದನಾತ್ಮಕ ಧರ್ಮ ಎಂದು ಬಣ್ಣಿಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗ್ರಂಥ ಬಿಡುಗಡೆ ಮಾಡಿದರು.

ಬೆಂಗಳೂರು ನಗರ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ ಪ್ರಾಸ್ತಾವಿಕ ಮಾತನಾಡಿದರು.
ಶರಣ ಸಾಹಿತ್ಯ ಪರಿಷತ್‌ ಗೌರವ ಸಲಹೆಗಾರ ಗೊ.ರು. ಚನ್ನಬಸಪ್ಪಅಧ್ಯಕ್ಷತೆ ವಹಿಸಿದ್ದರು.

ಬೇಲಿಮಠದ ಶಿವರುದ್ರ ಸ್ವಾಮೀಜಿ, ಪತ್ರಕರ್ತ ರಂಜಾನ್ ದರ್ಗಾ,
ಗ್ರಂಥ ಸಂಪಾದಕ ಅಶೋಕ ದೊಮ್ಮಲೂರು, ಲೋಕಸೇವಾ ಆಯೋಗದ ಸದಸ್ಯ ಎಚ್‌.ರವಿಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.