ADVERTISEMENT

ಪ್ರಜ್ವಲ್ ಪ್ರಕರಣ|ಮಹಿಳೆಯರ ಘನತೆಯ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲವೇ? ಕಾಂಗ್ರೆಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಏಪ್ರಿಲ್ 2024, 9:17 IST
Last Updated 29 ಏಪ್ರಿಲ್ 2024, 9:17 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಹಗರಣದ ವಿಷಯ ತಿಳಿದೂ ಸಹ ಪ್ರಜ್ವಲ್ ರೇವಣ್ಣನನ್ನು ಬಿಜೆಪಿ ಬೆಂಬಲಿಸಿದೆ ಎಂದಾದರೆ ರಾಜ್ಯದ ಮಹಿಳೆಯರ ಘನತೆಯ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ ಎಂದರ್ಥವಲ್ಲವೇ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಕಾಂಗ್ರೆಸ್‌, ಬಿಜೆಪಿ ಮುಖಂಡ ದೇವರಾಜೇಗೌಡರು, ಪ್ರಜ್ವಲ್ ರೇವಣ್ಣನ ಕರ್ಮಕಾಂಡದ ಬಗ್ಗೆ 2023ರ ಡಿಸೆಂಬರ್ 8ನೇ ತಾರೀಖಿನಂದೇ ಬಿಜೆಪಿ ನಾಯಕರ ಗಮನ ಸೆಳೆದಿದ್ದಾರೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದೆ.

ADVERTISEMENT

'ಎಲ್ಲಾ ಸಂಗತಿಗಳು ತಿಳಿದ ನಂತರವೂ ಮೋದಿಯವರು ಡಿಸೆಂಬರ್ 21ರಂದು ಆರೋಪಿಗಳಾದ ಪ್ರಜ್ವಲ್ ರೇವಣ್ಣ ಮತ್ತು ರೇವಣ್ಣರನ್ನು ಪ್ರಧಾನಿ ಕಚೇರಿಗೆ ಕರೆಸಿಕೊಂಡು ‘ಮೋದಿ ಪರಿವಾರಕ್ಕೆ’ ಸೇರಿಸಿಕೊಂಡರು' ಎಂದು ಆರೋಪಿಸಿದೆ.

‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಹಿಳಾ ಪೀಡನೆಯ ವಿಷಯ ನಗಣ್ಯವಾಗಿ ಕಂಡಿತೆ ಅಥವಾ ಮಹಿಳಾ ಪೀಡನೆಯನ್ನು ಪ್ರೋತ್ಸಾಹಿಸಿ ಬೆಂಬಲ ನೀಡಿದರೆ’ ಎಂದು ಕಿಡಿಕಾರಿದೆ.

ಸಾವಿರಾರು ಮಹಿಳೆಯರ ಮಾಂಗಲ್ಯಕ್ಕೆ ಕುತ್ತು ತರುವಲ್ಲಿ ಮೋದಿಯವರೂ ಪರೋಕ್ಷ ಬೆಂಬಲ ನೀಡಿದ್ದಾರೆ ಅಲ್ಲವೇ? ಎಂದು ಕಾಂಗ್ರೆಸ್‌ ಟೀಕಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.