ADVERTISEMENT

ವಾಯವ್ಯ ಶಿಕ್ಷಕರ ಕ್ಷೇತ್ರ: ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ ಗೆಲುವು ಬಹುತೇಕ ಖಚಿತ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 14:19 IST
Last Updated 15 ಜೂನ್ 2022, 14:19 IST
ಪ್ರಕಾಶ ಹುಕ್ಕೇರಿ ಬೆಂಬಲಿಗರ ಸಂಭ್ರಾಮಾಚರಣೆ
ಪ್ರಕಾಶ ಹುಕ್ಕೇರಿ ಬೆಂಬಲಿಗರ ಸಂಭ್ರಾಮಾಚರಣೆ   

ಬೆಳಗಾವಿ: ವಾಯವ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರ ಗೆಲುವು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.

ಚಲಾವಣೆಯಾದ 21,401 ಮತಗಳಲ್ಲಿ ಈಗಾಗಲೇ 20 ಸಾವಿರ ಮತಗಳ ಎಣಿಕೆ ಮುಗಿದಿದೆ. ಇದರಲ್ಲಿ ಪ್ರಕಾಶ ಹುಕ್ಕೇರಿ ಪರ 10,521 ಮತಗಳು ಬಂದಿವೆ. ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಅವರಿಗೆ 6051 ಮತ ಬಿದ್ದಿವೆ. ಮೂರನೇ ಸುತ್ತಿನಲ್ಲಿ 1,401 ಮತಗಳ ಎಣಿಕೆ ಮಾತ್ರ ಬಾಕಿ ಇದೆ.

ಆದರೆ, ಈಗಾಗಲೇ ಪ್ರಕಾಶ ಹುಕ್ಕೇರಿ ಅವರು ಚಲಾವಣೆಯಾದ ಒಟ್ಟು ಮತಗಳಲ್ಲಿ ಅರ್ಧಕ್ಕೂ ಹೆಚ್ಚು ಗುರಿ ಮುಟ್ಟಿದ್ದರಿಂದ ಅವರ ಗೆಲುವು ಖಚಿತವಾಗಿದೆ.

ADVERTISEMENT

ಫಲಿತಾಂಶ ನಿಚ್ಚಳವಾದ್ದರಿಂದ ಹುಕ್ಕೇರಿ ಅವರ ಬೆಂಬಲಿಗರು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ನಗರದ ಪ್ರಮುಖ ವೃತ್ತಗಳು ಹಾಗೂ ಕಾಂಗ್ರೆಸ್‌ ಕಚೇರಿಯ ಮುಂದೆ ಪಟಾಕಿ ಸಿಡಿಸಿ, ಗುಲಾಲ್‌ ಎರಚಾಡಿ, ಸಹಿ ಹಂಚಿ ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.