ಬೆಂಗಳೂರು: ಬಿಜೆಪಿ ಶಾಸಕ ಈಶ್ವರಪ್ಪ ಅವರ ಫೋಟೊ ಹಾಕಿ ಕರೆನ್ಸಿ ನೋಟ್‌ವೊಂದನ್ನು ಸಿದ್ಧಪಡಿಸಿರುವ ರಾಜ್ಯ ಕಾಂಗ್ರೆಸ್, ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿ ‘ಆಪರೇಷನ್ ಕಮಲ’ವನ್ನು ಗೇಲಿ ಮಾಡಿದೆ.
‘ಶಾಸಕ ಸಂಗಮೇಶ್ ಅವರಿಗೆ ನಾನು ನೀಡಿದ್ದು ₹500 ಕೋಟಿ ಆಫರ್’ ಎಂಬ ಈಶ್ವರಪ್ಪ ಅವರ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈ ರೀತಿ ವ್ಯಂಗ್ಯ ಮಾಡಿದೆ.
ಇದನ್ನೂ ಓದಿ:ಶಾಸಕ ಸಂಗಮೇಶ ಬೆಲೆ ಬರೀ ₹50 ಕೋಟಿಯೇ?
‘ಸಿಎಂ ಹುದ್ದೆಗೆ ₹2,500 ಕೋಟಿ ಪಾವತಿಸುವಾಗ ಆಪರೇಷನ್ ಕಮಲಕ್ಕೆ ₹500 ಕೋಟಿ ಹೆಚ್ಚಲ್ಲ ಅಲ್ಲವೇ? ಈಶ್ವರಪ್ಪ ಅವರೇ, ನೋಟ್ ಎಣಿಸುವ ಮೆಷಿನ್ ಇಟ್ಟಿದ್ದು ಆಪರೇಷನ್ ಕಮಲದ ₹500 ಕೋಟಿ ಎಣಿಸುವುದಕ್ಕಾ, 40 ಪರ್ಸೆಂಟ್ ಕಮಿಷನ್‌ನ ಲೂಟಿಯ ಹಣ ಎಣಿಸುವುದಕ್ಕಾ? ₹500 ಕೋಟಿ ಹೂಡಿಕೆ ಹಿಂತೆಗೆಯಲೆಂದೇ ಸಂತೋಷ್ ಪಾಟೀಲ್ ಜೀವ ತೆಗೆದಿರಾ?’ ಎಂದೂ ಕಾಂಗ್ರೆಸ್ ಪ್ರಶ್ನೆ ಮಾಡಿದೆ.
‘ಆಪರೇಷನ್ ಕಮಲದ ವೇಳೆ ಸಂಗಮೇಶ್ ಅವರಿಗೆ ಬಿಜೆಪಿ ₹50 ಕೋಟಿ ನೀಡುವ ಆಮಿಷ ಒಡ್ಡಿತ್ತು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕೆ.ಎಸ್ ಈಶ್ವರಪ್ಪ, ‘ಡಿ.ಕೆ.ಶಿವಕುಮಾರ್‌ಗೆ ಶಾಸಕರ ಬೆಲೆ ಗೊತ್ತಿಲ್ಲ. ನಾನು ಸಂಗಮೇಶ್‌ಗೆ ಕೊಟ್ಟಿದ್ದು ₹500 ಕೋಟಿ ಆಫರ್’ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.