ಬೆಂಗಳೂರು: ‘ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಯುವ ಸಂಸತ್ತಿಗೆ ಪ್ರಧಾನಿ ಮೋದಿ ಗೌರವ ನೀಡದಿರುವುದು ಆತಂಕಕಾರಿ ಬೆಳವಣಿಗೆ’ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.
‘ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷದ ವಿಚಾರದಲ್ಲಿ ಪ್ರಧಾನಿ ಮೋದಿ ಅವರ ದಿವ್ಯ ಮೌನ ಹಲವು ವ್ಯಾಖ್ಯಾನಗಳಿಗೆ ವಸ್ತುವಾಗಿದೆ. ಅವರು ಈ ಮೌನವನ್ನು ರಾಜಕೀಯಕ್ಕಾಗಿ ಜಾಣತನದಿಂದ ಉಪಯೋಗಿಸುತ್ತಿದ್ದಾರೆಯೇ’ ಎಂದು ಪ್ರಶ್ನಿಸಿದ್ದಾರೆ.
‘ಸಂಭಾಷಣೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಮೋದಿ ಅವರಿಗೆ ಅನಿಸಿರಬಹುದೇ? ಪ್ರಶ್ನಿಸುವವರನ್ನು ಹತಾಶರಾಗಿಸುವುದು ಉದ್ದೇಶವೇ? ಸಂಸತ್ತಿನ ಪ್ರಶ್ನೆಗಳು ನಿಷ್ಪ್ರಯೋಜಕ ಎಂಬ ನಂಬಿಕೆಯೇ’ ಎಂದೂ ಕೇಳಿರುವ ಚಂದ್ರಶೇಖರ್, ‘ಏನೇ ಇದ್ದರೂ ಪ್ರಧಾನಿಯವರು ಜನರ ನಂಬಿಕೆ ಕಳೆದುಕೊಂಡಿರುವುದು ಸ್ಪಷ್ಟ’ ಎಂದಿದ್ದಾರೆ.
‘ಮಣಿಪುರದ ಘಟನೆಯ ಕುರಿತ ವಿರೋಧ ಪಕ್ಷಗಳ ಪ್ರಶ್ನೆಗೆ ಉತ್ತರ ನೀಡಲಾಗದೆ ಮೋದಿ ಹೇಳಿಕೆ ನೀಡಲು ತಪ್ಪಿಸಿಕೊಳ್ಳುತ್ತಿರಬಹುದೇ’ ಎಂದೂ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.