ADVERTISEMENT

ವಿರೋಧಪಕ್ಷ ನಾಯಕನ ಹುದ್ದೆಯನ್ನೂ ಮಾರಾಟಕ್ಕಿಡಲಾಗಿದೆಯೇ?: ಕಾಂಗ್ರೆಸ್‌ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜೂನ್ 2023, 13:19 IST
Last Updated 27 ಜೂನ್ 2023, 13:19 IST
   

ಬೆಂಗಳೂರು: ವಿರೋಧ ಪಕ್ಷದ ನಾಯಕನ ಹುದ್ದೆಯನ್ನೂ ಮಾರಾಟಕ್ಕಿಡಲಾಗಿದೆಯೇ ಎಂದು ಕಾಂಗ್ರೆಸ್‌ ಬಿಜೆಪಿಯನ್ನು ಪ್ರಶ್ನೆ ಮಾಡಿದೆ.

ಅಲ್ಲದೆ ಇನ್ನೂ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ ಎಂದರೆ ಭಾರೀ ಚೌಕಾಶಿ ವ್ಯವಹಾರ ನಡೆಯುತ್ತಿದೆ ಎಂದೇ ಅರ್ಥ ಎಂದು ಕುಹಕವಾಡಿದೆ.

ವಿರೋಧ ಪಕ್ಷ ನಾಯಕನ ಹುದ್ದೆಗೆಷ್ಟು? ಪಕ್ಷದ ಅಧ್ಯಕ್ಷ ಹುದ್ದೆಗೆಷ್ಟು? ಅಮಿತ್‌ ಶಾ ಅವರೇ ಉತ್ತರಿಸಬೇಕು ಎಂದು ಕಾಂಗ್ರೆಸ್‌ ಹೇಳಿದೆ.

ADVERTISEMENT

ಈ ಬಗ್ಗೆ ಕಾಂಗ್ರೆಸ್‌ ಮಾಡಿರುವ ಟ್ವೀಟ್‌ ಹೀಗಿದೆ:

ಬಿಜೆಪಿಗೆ ಇನ್ನೂ ಸಹ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ ಎಂದರೆ ಭಾರಿ ಚೌಕಾಶಿ ವ್ಯವಹಾರ ನಡೆಯುತ್ತಿದೆ ಎಂದೇ ಅರ್ಥ. ಮುಖ್ಯಮಂತ್ರಿ ಹುದ್ದೆಗೆ ₹2,500 ಕೋಟಿ ಫಿಕ್ಸ್ ಆಗಿತ್ತು. ವಿಪಕ್ಷ ನಾಯಕನ ಹುದ್ದೆಯನ್ನೂ ಮಾರಾಟಕ್ಕಿಡಲಾಗಿದೆಯೇ? ವಿಪಕ್ಷ ನಾಯಕನ ಹುದ್ದೆಗೆಷ್ಟು? ಪಕ್ಷದ ಅಧ್ಯಕ್ಷ ಹುದ್ದೆಗೆಷ್ಟು? ಅಮಿತ್‌ ಶಾ ಅವರು ಉತ್ತರಿಸಬೇಕು‘.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.